ಚನ್ನಮ್ಮನ ಆದರ್ಶ ಮೈಗೂಡಿಸಿಕೊಳ್ಳಿ

Yelburga kittur rani chennamma jayanti
ಯಲಬುರ್ಗಾ ತಾಲೂಕಿನ ಬಂಡಿಹಾಳದಲ್ಲಿ ಮಹಿಳಾ ಡೊಳ್ಳು ಮೇಳದೊಂದಿಗೆ ಕಿತ್ತೂರು ರಾಣಿ ಚನ್ನಮ್ಮ ಭಾವಚಿತ್ರ ಮೆರವಣಿಗೆ ನಡೆಯಿತು.
Published on

ಯಲಬುರ್ಗಾ: ದೇಶದ ಸ್ವಾತಂತ್ರೃಕ್ಕಾಗಿ ತ್ಯಾಗ ಬಲಿದಾನ ಮಾಡಿದ ಕಿತ್ತೂರು ರಾಣಿ ಚನ್ನಮ್ಮನ ಆದರ್ಶ ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ವೀರಣ್ಣ ಹುಬ್ಬಳ್ಳಿ ಹೇಳಿದರು.

ತಾಲೂಕಿನ ಬಂಡಿಹಾಳ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಬ್ರಿಟಿಷರ ವಿರುದ್ಧ ಹೋರಾಡಿದ ಚನ್ನಮ್ಮನ ಶೌರ್ಯ, ಸಾಹಸ ಮೆಚ್ಚಬೇಕು. ಕೆಚ್ಚೆದೆಯ ಹೋರಾಟದಿಂದ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ ವೀರರಾಣಿಯ ಆದರ್ಶ ಎಲ್ಲರಗೂ ಮೈಗೂಡಿಸಿಕೊಳ್ಳಬೇಕು. ಚನ್ನಮ್ಮನ ಹೋರಾಟ ಕುರಿತು ಯುವ ಪೀಳಿಗೆ ಅಧ್ಯಯನ ಮಾಡಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ಮುನ್ನಡೆಯಬೇಕು ಎಂದರು.

ಪಪಂ ನಿಕಟ ಪೂರ್ವ ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಮಾತನಾಡಿ, ರಾಣಿ ಚನ್ನಮ್ಮ, ಮಹಿಳೆ ಪುರುಷರಿಗೆ ಸರಿಸಮಾನ ಎಂಬ ಸಂದೇಶವನ್ನು ಸಾರಿ ಅದನ್ನು ಸಾಧಿಸಿ ಮಾದರಿಯಾಗಿದ್ದಾರೆ ಎಂದರು. ಪ್ರಮುಖರಾದ ರೇಣುಕಪ್ಪ ಬಂಡ್ರಿ, ಮಂಜುನಾಥ ಕಳಸಾಪುರ, ಬಸವರಾಜ ಬಂಡಿಹಾಳ, ಸಂತೋಷ್ ಬಂಡ್ರಿ, ಕಲ್ಲಪ್ಪ ಕರಮುಡಿ, ಗವಿಸಿದ್ದಪ್ಪ, ನಾಗರಾಜ ಬಳೂಟಿಗಿ, ಬಂಡಿಹಾಳ, ಶರಣಪ್ಪ, ಈಶಪ್ಪ, ಕಳಕಪ್ಪ, ಮೇಘರಾಜ ಹುಬ್ಬಳ್ಳಿ, ಮಂಜುನಾಥ, ಈರಪ್ಪ, ಬಸಪ್ಪ ಬಂಡಿಹಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net