ಕೆಣಕಿದರೆ ಬಿಚ್ಚಿಡುವೆ ಕಾಂಗ್ರೆಸ್‌ನವರ ಬುತ್ತಿ: ಬಸವರಾಜ ರಾಯರಡ್ಡಿಗೆ ಸಚಿವ ಹಾಲಪ್ಪ ಆಚಾರ್ ಟಾಂಗ್

101222 Hirevankalakunta Minister Bhoomipooja
ಹಿರೇವಂಕಲಕುಂಟಾದಲ್ಲಿ ರಸ್ತೆ ಕಾಮಗಾರಿಗೆ ಸಚಿವ ಹಾಲಪ್ಪ ಆಚಾರ್ ಭೂಮಿಪೂಜೆ ನೆರವೇರಿಸಿದರು.
Published on

ಯಲಬುರ್ಗಾ: ಅಭಿವೃದ್ಧಿ ವಿಚಾರದಲ್ಲಿ ನನ್ನನ್ನು ಕೆಣಕಿದರೆ ಜನರ ಮುಂದೆ ಕಾಂಗ್ರೆಸ್‌ನವರ ಬುತ್ತಿ ಬಿಚ್ಚಿಡುತ್ತೇನೆ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ವಿರುದ್ಧ ಸಚಿವ ಹಾಲಪ್ಪ ಆಚಾರ್ ನೇರವಾಗಿ ಹರಿಹಾಯ್ದರು.

ಹಿರೇವಂಕಲಕುಂಟಾ, ತಾಳಕೇರಿ, ಯಡ್ಡೋಣಿ ಹಾಗೂ ಬುಡಕುಂಟಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೃಷ್ಣಾ ಬಿಸ್ಕೀಂ ನೀರಾವರಿ ಯೋಜನೆಯ 2ನೇ ಹಂತದ ಕಾಮಗಾರಿಗೆ ಅನುಮೋದನೆ ನೀಡದಿರುವುದಕ್ಕೆ ಮಾಜಿ ಸಚಿವ ರಾಯರಡ್ಡಿ ನೇರಹೊಣೆ. ನಾನು ದೇವರ ಸಾಕ್ಷಿಯಾಗಿ ರೈತರ ಹಿತ ದೃಷ್ಟಿಯಿಂದ ನೀರಾವರಿಗಾಗಿ ಶಕ್ತಿಮೀರಿ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

ಕರೊನಾ ಸಂದರ್ಭದಲ್ಲಿ ಕ್ಷೇತ್ರದ ಜನರ ಸಂಕಷ್ಟ ಆಲಿಸದೇ ಇರುವವರನ್ನು ಜನ ನಂಬುವುದಾದರೂ ಹೇಗೆ? ಯಾವ ನೈತಿಕತೆಯ ಮುಖ ಇಟ್ಟುಕೊಂಡು ಜನರ ಮುಂದೆ ಬರುತ್ತೀರಿ ಎಂದು ಕಿಡಿಕಾರಿದರು .ಜನರು ತಿರಸ್ಕಾರ ಮಾಡಿದ್ದರಿಂದ ದೇಶದಲ್ಲಿ ಕಾಂಗ್ರೆಸ್‌ನ ಅಸ್ತಿತ್ವ ಇಲ್ಲದಂತಾಗಿದೆ. ಶೇ.90 ಜನರು ಬಿಜೆಪಿಯನ್ನು ನಂಬಿದ್ದಾರೆ. ಇದಕ್ಕೆ ಗುಜರಾತ್ ಚುನಾವಣೆಯೇ ಸಾಕ್ಷಿ ಎಂದರು.

ತಾಪಂ ಇಒ ಸಂತೋಷ ಪಾಟೀಲ್, ಗ್ರಾಪಂ ಅಧ್ಯಕ್ಷರಾದ ಹುಸೇನ್‌ಬಿ ಅತ್ತಾರ, ಗಂಗಮ್ಮ ಅಮರೇಶ ಸಿದ್ದಾಪುರ, ಸದಸ್ಯ ಪ್ರೇಮ್‌ಕುಮಾರ್ ಸುರಳ, ಪ್ರಮುಖರಾದ ರಾಚಪ್ಪ ಹುರಳಿ, ಶರಣಪ್ಪ ಹೊಸ್ಕೇರಿ, ಅಯ್ಯನಗೌಡ ಕೆಂಚಮ್ಮನವರ್, ಮುತ್ತನಗೌಡ ಗುರೂಜಿ, ವೀರಣ್ಣ ಹುಬ್ಬಳ್ಳಿ, ಬಸನಗೌಡ ತೊಂಡಿಹಾಳ, ಶರಣಪ್ಪ ನಿಲೋಗಲ್, ಆನಂದ ಈಳಿಗೇರ್, ಈಶಪ್ಪ ಸಿದ್ದಾಪುರ, ಕೆಬಿಜೆಎನ್‌ಎಲ್ ಎಇಇ ಚನ್ನಪ್ಪ, ಪಿಡಬ್ಲುೃಡಿ ಎಇಇ ಐ.ಎಸ್.ಹೊಸೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net