

ಯಲಬುರ್ಗಾ: ನರೇಗಾದಡಿ ವಿವಿಧ ಕಾಮಗಾರಿ ಆರಂಭಿಸಿ ಅಭಿವೃದ್ಧಿಪಡಿಸುವ ಅವಕಾಶವನ್ನು ಕಾಯಕ ಬಂಧುಗಳು ಸದುಪಯೋಗಪಡಿಸಿಕೊಳ್ಳಲಿ ಎಂದು ತಾಪಂ ಇಒ ಸಂತೋಷ ಪಾಟೀಲ್ ಹೇಳಿದರು.
ಪಟ್ಟಣದ ತಾಪಂ ಸಾಮರ್ಥ್ಯಸೌಧದಲ್ಲಿ ನರೇಗಾ ಯೋಜನೆ ಕುರಿತು ಕಾಯಕ ಬಂಧುಗಳಿಗೆ ಮಂಗಳವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೈಸರ್ಗಿಕ ಸಂಪನ್ಮೂಲ, ಸಮುದಾಯ ಆಸ್ತಿಗಳಾದ ಕೆರೆ, ನಾಲಾ ಸುಧಾರಣೆ, ಗೋಕಟ್ಟೆ, ಸರ್ಕಾರಿ ಸ್ವತ್ತುಗಳನ್ನು ನರೇಗಾ ಯೋಜನೆಯಡಿ ಸಂರಕ್ಷಣೆ ಹಾಗೂ ಅಭಿವೃದ್ಧಿಪಡಿಸುವ ಕೆಲಸ ನರೇಗಾದಡಿ ನಡೆಯುತ್ತದೆ. ಗ್ರಾಮೀಣ ಕೂಲಿಕಾರರಿಗೆ ನರೇಗಾ ಕೆಲಸ ನೀಡುವುದರಿಂದ ಜೀವನಮಟ್ಟ ಸುಧಾರಣೆಯಾಗಲಿದೆ. ಕೂಲಿಕಾರರು ಆರ್ಥಿಕನ ಸಬಲರಾಗಲು ಮೇಟಿಗಳ ಪಾತ್ರ ಮುಖ್ಯ ಎಂದರು.
ತಾಪಂ ಸಹಾಯಕ ನಿರ್ದೇಶಕ ಹನುಮಂತಗೌಡ ಪಾಟೀಲ್ ಮಾತನಾಡಿದರು. ಪ್ರಾರಂಭ ಸಂಸ್ಥೆಯ ಸಿಎಸ್‌ಒ ಮುದ್ದುರಂಗಪ್ಪ, ತರಬೇತುದಾರರಾದ ದೇವಪ್ಪ ಟೆಂಗುಂಟಿ, ಶಾಂತಮ್ಮ ಅಂಗಡಿ, ಭೀಮಪ್ಪ ಹವಳಿ, ವಿಶ್ವನಾಥ ಬಂಡಿ, ತಾಪಂ ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ, ವಿಷಯ ನಿರ್ವಾಹಕ ಬಸವರಾಜ ಮಾಲಿಪಾಟೀಲ್ ಇತರರಿದ್ದರು.