ಕಾಯಕದಿಂದ ಮನಗೆದ್ದಿದ್ದ ಮಾದಯ್ಯ- ವಿರೂಪಾಕ್ಷಪ್ಪ ಹೂಗಾರ ಹೇಳಿಕೆ

2009 Yalaburga Madayya Jayanti
ಯಲಬುರ್ಗಾದಲ್ಲಿ ಹೂಗಾರ ಸಮುದಾಯದಿಂದ ಸೋಮವಾರ ಹೂಗಾರ ಮಾದಯ್ಯ ಜಯಂತಿ ಆಚರಿಸಲಾಯಿತು.
Published on

ಯಲಬುರ್ಗಾ: ಕಾಯಕದಿಂದಲೇ ಬಸವಣ್ಣನವರ ಮನಗೆದ್ದಿದ್ದ ಮಾದಯ್ಯರ ಆದರ್ಶ ಎಲ್ಲರೂ ಪಾಲಿಸಬೇಕು ಎಂದು ಹೂಗಾರ ಸಮುದಾಯದ ತಾಲೂಕು ಅಧ್ಯಕ್ಷ ವಿರೂಪಾಕ್ಷಪ್ಪ ಹೂಗಾರ ಹೇಳಿದರು.

ಪಟ್ಟಣದಲ್ಲಿ ಹೂಗಾರ ಸಮುದಾಯದಿಂದ ಸೋಮವಾರ ಹಮ್ಮಿಕೊಂಡಿದ್ದ ಹೂಗಾರ ಮಾದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೂಗಾರ ಮಾದಯ್ಯ ರಚಿಸಿರುವ ಕೆಲವೇ ವಚನಗಳಲ್ಲಿ ಸಾಮಾಜಿಕ ಸಮಾನತೆ, ಮೂಢನಂಬಿಕೆ, ಅಂಧಶ್ರದ್ಧೆಯ ಬಗ್ಗೆ ಉಲ್ಲೇಖಿಸಿದ್ದಾರೆ. ಶಿವಶರಣ ಮಾದಯ್ಯರ ಬಗ್ಗೆ ಬೆಳಕು ಚೆಲ್ಲುವ ಅಗತ್ಯವಿದೆ. ಸಮುದಾಯದವರು ಶಿಕ್ಷಣದ ಜತೆಗೆ ಸಂಘಟನೆಗೆ ಒತ್ತು ನೀಡಬೇಕಿದೆ ಎಂದರು. ಹೂಗಾರ ಸಮುದಾಯದ ಪ್ರಮುಖರಾದ ಮಹಾದೇವಪ್ಪ, ಬಸವರಾಜ, ಸಣ್ಣಬಸಪ್ಪ, ಶರಣಪ್ಪ, ಚನ್ನವೀರಪ್ಪ, ಸಂಗಮೇಶ, ಅಕ್ಷತಾ, ಶಾರದಾ, ಮಂಜುಳಾ, ಕಳಕಪ್ಪ, ವಿ.ಬಸವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net