

ಯಲಬುರ್ಗಾ: ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ ಎಂದು ಮಳಖೇಡದ ತಿರುಪತಿ ಆಚಾರ್ ಹೇಳಿದರು. ವಜ್ರಬಂಡಿ ಹನುಮಂತ ದೇವಸ್ಥಾನದಲ್ಲಿ ಶನಿವಾರ ಕಾರ್ತಿಕೋತ್ಸವದಲ್ಲಿ ಮಾತನಾಡಿದರು. ಧಾರ್ಮಿಕ ಶ್ರದ್ಧಾ ಕೇಂದ್ರಗಲ್ಲಿನ ಕಾರ್ಯಕ್ರಮಗಳಿಂದ ಒತ್ತಡದ ಬದುಕಿಗೆ ಶಾಂತಿ, ಸಂತೋಷ ನೆಲೆಸುತ್ತದೆ ಎಂದರು.
ಬೆಳಗ್ಗೆ ಹನುಮಂತ ವಿಗ್ರಹಕ್ಕೆ ನಿರ್ಮಾಲ್ಯ ವಿಸರ್ಜನೆ, ವಿಶೇಷ ಪೂಜೆ, ಅಲಂಕಾರ, ಪಂಚಾಮೃತ ಅಭಿಷೇಕ, ಮಂಗಳಾರತಿ, ಮಹಾನೈವೇದ್ಯ ಸೇರಿ ವಿವಿಧ ಧಾರ್ಮಿಕ ಕೈಂಕರ್ಯ ನೆರವೇರಿದವು. ವಾಯುಸ್ತುತಿಃ ಪುನಶ್ಚರಣ, ರಾಘವೇಂದ್ರ ಸ್ವಾಮಿ ಅಷ್ಟೋತ್ತರ ಪಾರಾಯಣ ಮಾಡಲಾಯಿತು. ಮಹಿಳಾ ಭಜನಾ ಮಂಡಳಿ ಸದಸ್ಯರಿಂದ ವಿಜಯದಾಸರ ಸುಳಾದಿ ಮಂತ್ರ ಪಟಿಸಿ ಭಕ್ತಿ ಸಮರ್ಪಿಸಿದರು. ಸಂಜೆ ಹನುಮಂತ ದೇವರ ಪಲ್ಲಕ್ಕಿ ಉತ್ಸವ, ಲಘು ರಥೋತ್ಸವ, ದೀಪೋತ್ಸವ ವಿಜೃಂಭಣೆಯಿಂದ ಜರುಗಿತು. ಪ್ರಮುಖರಾದ ರಾಮರಾವ್ ದೇಸಾಯಿ, ಭೀಮರಾವ್ ದೇಸಾಯಿ, ಪವನ್ಕುಮಾರ್ ಕನ್ನೇರಮಡು, ನಾರಾಯಣಾಚಾರ್ ಜೋಶಿ, ಬಂಡೇರಾವ್ ದೇಸಾಯಿ, ರಾಘವೇಂದ್ರ ದೇಸಾಯಿ, ಸುಧೀಂದ್ರಾಚಾರ್, ಕಿರಣ್ಕುಮಾರ್ ಸಾಲಭಾವಿ, ಅನಂತರಾವ್ ದೇಸಾಯಿ, ಪ್ರಾಣೇಶ ದೇಸಾಯಿ, ಗುರುರಾಜ ಅಡವಿಭಾವಿ, ಅನಿಲ್ಕುಮಾರ್ ದೇಸಾಯಿ, ಅಡವಾಚಾರ್ ಜೋಶಿ, ಕೃಷ್ಣ ಬೆಣಕಲ್ ಸೇರಿ ಇನ್ನಿತರರಿದ್ದರು.