ಪ್ರತಿಭೆ ಅನಾವರಣಕ್ಕೆ ಕಾರಂಜಿ ಉತ್ತಮ ವೇದಿಕೆ

UDGHATANE
ಯಲಬುರ್ಗಾ ತಾಲೂಕಿನ ತರಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಕಲಿಕೋತ್ಸವದ ನೋಡಲ್ ಅಧಿಕಾರಿ ಕನಕಪ್ಪ ಕಂಬಳಿ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷ ಯಮನಪ್ಪ ಮಾಳಿ, ಎಸ್ಡಿಎಂಸಿ ಅಧ್ಯಕ್ಷ ಮಂಜುನಾಥ ಪಾಟೀಲ್, ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ್, ಮುಖ್ಯಶಿಕ್ಷಕ ದೇವಪ್ಪ ವಾಲ್ಮೀಕಿ, ಪ್ರಮುಖರಾದ ಸಿದ್ದಲಿಂಗಪ್ಪ ಶ್ಯಾಗೋಟಿ, ಪ್ರಭುಗೌಡ ಪಾಟೀಲ್ ಇದ್ದರು.
Published on

ಯಲಬುರ್ಗಾ: ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ಪ್ರತಿಭಾ ಕಾರಂಜಿ ಕಲಿಕೋತ್ಸವದ ನೋಡಲ್ ಅಧಿಕಾರಿ ಕನಕಪ್ಪ ಕಂಬಳಿ ಹೇಳಿದರು.

ತಾಲೂಕಿನ ತರಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ ಬುಧವಾರ ಆಯೋಜಿಸಿದ್ದ ಹಿರೇಅರಳಿಹಳ್ಳಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಾಲಾ ಹಂತದಲ್ಲಿ ನಡೆಯುವ ಪ್ರತಿಭಾ ಕಾರಂಜಿ, ಕಲಿಕೋತ್ಸವ ಮಕ್ಕಳಲ್ಲಿರುವ ಪ್ರತಿಭೆ ಹೊರ ಹಾಕಲು ಸಹಕಾರಿಯಾಗಿವೆ. ಪ್ರತಿಯೊಬ್ಬ ವಿದ್ಯಾರ್ಥಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸಬೇಕು. ಆ ನಿಟ್ಟಿನಲ್ಲಿ ಪಾಲಕರು, ಶಿಕ್ಷಕರು ಪ್ರೋತ್ಸಾಹಿಸಬೇಕು ಎಂದರು.

ಪ್ರೌಢಶಾಲಾ ನೌಕರರ ಸಂಘದ ತಾಲೂಕು ಅಧ್ಯಕ್ಷ ಅಶೋಕ ಮಾಲಿಪಾಟೀಲ್ ಮಾತನಾಡಿ, ಬಹುತೇಕ ಮಕ್ಕಳು ಕೀಳರಿಮೆಯಿಂದ ಹಿಂದುಳಿದಿರುತ್ತಾರೆ. ಅಂಥವರನ್ನು ಗುರುತಿಸಿ ಸೂಕ್ತ ರೀತಿಯಲ್ಲಿ ಪ್ರೋತ್ಸಾಹಿಸಿದಾಗ ಪ್ರತಿಭೆಗಳಾಗಿ ಹೊರಹೊಮ್ಮಲು ಸಾಧ್ಯ ಎಂದರು. ಸಂಪನ್ಮೂಲ ವ್ಯಕ್ತಿ ಹುಸೇನ್ ಭಾಗವಾನ್ ಮಾತನಾಡಿದರು.

ಪ್ರತಿಭಾ ಕಾರಂಜಿಯಲ್ಲಿ ಕಂಠಪಾಠ, ಧಾರ್ಮಿಕ ಪಠಣ, ಲಘು ಸಂಗೀತ, ಕಥೆ ಹೇಳುವಿಕೆ, ಅಭಿನಯ ಗೀತೆ, ಭಕ್ತಿ ಗೀತೆ, ಕವ್ವಾಲಿ, ಛದ್ಮವೇಷ, ಆಶು ಭಾಷಣ, ದೇಶಭಕ್ತಿ ಗೀತೆ, ಜನಪದ ನೃತ್ಯ, ಕೋಲಾಟ, ರಸಪ್ರಶ್ನೆ, ಭಾಷಣ, ಮಿಮಿಕ್ರಿ, ಭರತನಾಟ್ಯ, ಚರ್ಚಾ ಸ್ಪರ್ಧೆ, ನೃತ್ಯ, ಸಂಗೀತ, ರಂಗೋಲಿ, ಚಿತ್ರಕಲೆ, ಡೊಳ್ಳುಕುಣಿತ ಇತರ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿಜೇತರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಗ್ರಾಪಂ ಅಧ್ಯಕ್ಷ ಯಮನಪ್ಪ ಮಾಳಿ, ಎಸ್ಡಿಎಂಸಿ ಅಧ್ಯಕ್ಷ ಮಂಜುನಾಥ ಪಾಟೀಲ್, ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ್, ಮುಖ್ಯಶಿಕ್ಷಕ ದೇವಪ್ಪ ವಾಲ್ಮೀಕಿ, ಪ್ರಮುಖರಾದ ಸಿದ್ದಲಿಂಗಪ್ಪ ಶ್ಯಾಗೋಟಿ, ಪ್ರಭುಗೌಡ ಪಾಟೀಲ್, ಮುತ್ತಣ್ಣ ಮೇಟಿ, ಬಸವರಾಜ ವಲ್ಮಕೊಂಡಿ, ಯಮನೂರಪ್ಪ ತಳವಾರ, ಕರಿಯಪ್ಪ ಶಿಲ್ಪಿ, ನಿಂಗಪ್ಪ ಮೇಟಿ, ಅಶೋಕ ಕೋಡದಾಳ, ಮುದಿಯಪ್ಪ ಮೇಟಿ, ಯಂಕೋಬ ನಾಯಕ್, ಬಸವರಾಜ ಹವಳೆ, ಮೇಹಬೂಬ್ ಬಾದಷಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net