ಛಲ ಯುವ ಪೀಳಿಗೆಗೆ ಸ್ಫೂರ್ತಿ - ತಹಸೀಲ್ದಾರ್ ಶ್ರೀಶೈಲ ತಳವಾರ್

Yalaburga Bhagiratha Jayanti
ಯಲಬುರ್ಗಾ ತಹಸೀಲ್ ಕಚೇರಿಯಲ್ಲಿ ಮಂಗಳವಾರ ಭಗೀರಥ ಮಹರ್ಷಿ ಜಯಂತಿ ಆಚರಿಸಲಾಯಿತು.
Published on

ಯಲಬುರ್ಗಾ: ಘೋರ ತಪಸ್ಸಿನ ಮೂಲಕ ಗಂಗೆಯನ್ನು ಧರೆಗೆ ತಂದ ಭಗೀರಥ ಮಹರ್ಷಿಯ ಪ್ರಯತ್ನ, ಛಲ ಹಾಗೂ ಏಕಾಗ್ರತೆ ಯುವ ಪೀಳಿಗೆಗೆ ಸ್ಪೂರ್ತಿಯಾಗಿದೆ ಎಂದು ತಹಸೀಲ್ದಾರ್ ಶ್ರೀಶೈಲ ತಳವಾರ್ ಹೇಳಿದರು.

ಪಟ್ಟಣದ ತಹಸೀಲ್ ಕಚೇರಿಯ ಸಭಾ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನುಕುಲದ ಒಳಿತಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹನೀಯರ ತತ್ವಾದರ್ಶ ಎಲ್ಲರೂ ಪಾಲಿಸಬೇಕು ಎಂದು ಸಲಹೆ ನೀಡಿದರು. ಗ್ರೇಡ್-2 ತಹಸೀಲ್ದಾರ್ ನಾಗಪ್ಪ ಸಜ್ಜನ್, ಶಿರಸ್ತೇದಾರ್ ದೇವರಡ್ಡಿ, ಸಿಬ್ಬಂದಿ ರೆಹಮಾನ್, ದಾದಾಪೀರ್, ಶ್ರೀಧರಗೌಡ, ಶಂಭುಲಿಂಗ ಮತ್ತು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net