29ರಿಂದ ಭಾರತೀಯ ಸಂಸ್ಕೃತಿ ಉತ್ಸವ

Untitled design(1)
Published on

ಯಲಬುರ್ಗಾ: ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ಭಾರತೀಯ ಸಂಸ್ಕೃತಿ ಉತ್ಸವ ಪ್ರಯುಕ್ತ ಹಮ್ಮಿಕೊಂಡಿರುವ ರಥಯಾತ್ರೆಯನ್ನು ಪಟ್ಟಣದಲ್ಲಿ ಮಂಗಳವಾರ ವಿಕಾಸ ಅಕಾಡೆಮಿ ತಾಲೂಕು ಘಟಕ ಸ್ವಾಗತಿಸಿತು.

ಅಕಾಡೆಮಿ ಪ್ರಮುಖ ಪ್ರಭುರಾಜ ಕಲಬುರಗಿ ಮಾತನಾಡಿ, ಜ.29ರಿಂದ ಫೆ.6ರವರೆಗೆ ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ಭಾರತೀಯ ಸಂಸ್ಕೃತಿ ಉತ್ಸವ-7 ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಪಟ್ಟಣ ಸೇರಿ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯ ಜನರು ಪಾಲ್ಗೊಳ್ಳಬೇಕು. ಉತ್ಸವ ನಿಮಿತ್ತ ನಾನಾ ರೀತಿಯ ಕಾರ್ಯಕ್ರಮ ನಡೆಯಲಿವೆ. ವಿದ್ವಾಂಸರು ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಂಸ್ಥೆ ಹಾಗೂ ವಿಕಾಸ ಅಕಾಡೆಮಿ ಸಹಯೋಗದಲ್ಲಿ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.

ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಸದಸ್ಯರಾದ ವಸಂತ ಭಾವಿಮನಿ, ಕಳಕಪ್ಪ ತಳವಾರ್, ಬಸಲಿಂಗಪ್ಪ ಕೊತ್ತಲ್, ಮುಖಂಡರಾದ ಪ್ರವೀಣ ಬಸವರಾಜ ಉಳ್ಳಾಗಡ್ಡಿ, ಸಿದ್ರಾಮೇಶ ಬೇಲೇರಿ, ಸಂಗಪ್ಪ ಕೊಪ್ಪಳ, ಮಲ್ಲೇಶಗೌಡ ಪೊಲೀಸ್ ಪಾಟೀಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net