ಹುಲೇಗುಡ್ಡ ಶಾಲೆಗೆ 250 ಊಟದ ತಟ್ಟೆ ದೇಣಿಗೆ

10032020 Yelburga Dinner plate donate
Published on

ಯಲಬುರ್ಗಾ: ಹುಲೇಗುಡ್ಡದ ಸಹಿಪ್ರಾ ಶಾಲೆಗೆ ಎಸ್ಡಿಎಂಸಿ ಸಮಿತಿಯಿಂದ ಮಂಗಳವಾರ 15 ಸಾವಿರ ರೂ. ಮೌಲ್ಯದ 250 ಊಟದ ತಟ್ಟೆಗಳನ್ನು ದೇಣಿಗೆ ನೀಡಲಾಯಿತು. ಮುಖ್ಯಶಿಕ್ಷಕ ಶರಣಯ್ಯ ಸರಗಣಾಚಾರ್ ಮಾತನಾಡಿ, ಶಾಲಾ ಮಕ್ಕಳ ಬಿಸಿಯೂಟದ ಅನುಕೂಲಕ್ಕಾಗಿ ಎಸ್ಡಿಎಂಸಿ ನೀಡಿದ ತಟ್ಟೆಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಕಲಿಕೆಯ ಕಡೆಗೆ ಗಮನ ಹರಿಸಬೇಕು. ಗ್ರಾಮಸ್ಥರ ಸಹಕಾರದಿಂದ ಗ್ರಾಮೀಣ ಪ್ರದೇಶದ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಸಾಧ್ಯ ಎಂದು ಹೇಳಿದರು.

ಎಸ್ಡಿಎಂಸಿ ಅಧ್ಯಕ್ಷ ಮುದಕಯ್ಯ ಚಿತ್ತರಗಿಮಠ, ಗ್ರಾಪಂ ಅಧ್ಯಕ್ಷ ಬಾಳಪ್ಪ ಬಂಡ್ಲಿ, ಉಪಾಧ್ಯಕ್ಷ ಕುದುರೆಲ್ಲಪ್ಪ ಹರಿಜನ್, ಸದಸ್ಯ ಹನುಮಗೌಡ, ಶಿಕ್ಷಕರಾದ ಕಲ್ಲಯ್ಯ, ಭಾಷಾಅಲಿ, ರೇಣುಕಾ, ಹೇಮಲತಾ, ರಮೇಶ, ಕುದುರೆಲ್ಲಪ್ಪ, ವಿರೇಶ. ಗೀತಾ ಹಾಗೂ ಗ್ರಾಮದ ಗುರು ಹಿರಿಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net