ಫಲಿತಾಂಶ ಸುಧಾರಣೆಗೆ ಶ್ರಮಿಸದಿದ್ದರೆ ಕ್ರಮ

PARISHILANE
ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾದ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕ ರಾಜು ತಳವಾರ್ ಶುಕ್ರವಾರ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದರು. ಪ್ರಾಚಾರ್ಯ ಹನುಮೇಶ ಕುಷ್ಟಗಿ, ಶಿಕ್ಷಕರಾದ ಸದಾನಂದ ಪಾಟೀಲ್ ಇದ್ದರು.
Published on

ಯಲಬುರ್ಗಾ: ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕ ರಾಜು ತಳವಾರ್ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಧ್ಯಾಹ್ನ 4 ಗಂಟೆಗೆ ಶಾಲೆಗೆ ಆಗಮಿಸಿದ ಅವರು, ಸಂಜೆ 7ಗಂಟೆ ವರೆಗೆ ಶಾಲೆಯ ಪ್ರಮುಖ ದಾಖಲಾತಿ, ವಾರ್ಷಿಕ ಕ್ರಿಯಾಯೋಜನೆ, ಶಿಕ್ಷಕರ ಹಾಜರಾತಿ ಪುಸ್ತಕ, ಶಾಲಾ ಆಡಳಿತ ನಿರ್ವಹಣಾ ಕಡತಗಳನ್ನು ಪರಿಶೀಲನೆ ನಡೆಸಿ, ವಸತಿ ನಿಲಯಗಳ ವೀಕ್ಷಣೆ, ಮಕ್ಕಳೊಂದಿಗೆ ಸಂವಾದ, ಶಿಕ್ಷಕರ ಪಾಠ ಬೋಧನೆ ವೀಕ್ಷಿಸಿದರು.

ಬಳಿಕ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಸರಿಯಾಗಿ ಸರಳ ಅರ್ಥದಲ್ಲಿ ಪಾಠ ಬೋಧನೆ ಮಾಡದೇ ಹೋದರೆ ಮುಲಾಜಿಲ್ಲದೇ ಅಮಾನತು ಮಾಡಬೇಕಾಗುತ್ತದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಸೂಕ್ರ ಕ್ರಮಕೈಗೊಳ್ಳಬೇಕು. ಮಕ್ಕಳಿಗೆ ಮೂಲ ಸೌಕರ್ಯ ಒದಗಿಸುವಿಕೆ, ಲೇಖನ ಸಾಮಗ್ರಿ, ಮೆನು ಚಾರ್ಟ್ ಪ್ರಕಾರ ಉಪಹಾರವನ್ನು ಅಚ್ಚುಕಟ್ಟಾಗಿ ನೀಡಬೇಕು. ವಿದ್ಯಾರ್ಥಿಗಳು ಶಿಸ್ತು ರೂಢಿಸಿಕೊಳ್ಳಬೇಕು ಎಂದರು.

ಈ ಸಂದರ್ಭ ಪ್ರಾಚಾರ್ಯ ಹನುಮೇಶ ಕುಷ್ಟಗಿ, ಶಿಕ್ಷಕರಾದ ಸದಾನಂದ ಪಾಟೀಲ್, ಸತೀಶ, ಹನುಮಪ್ಪ ನರೇಗಲ್, ಸ್ಟಾಪ್‌ನರ್ಸ್ ಚನ್ನಮಲ್ಲಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net