ಗುನ್ನಾಳ ಗ್ರಾಪಂಗೆ ಶಂಕ್ರಮ್ಮ ಶರಣಪ್ಪ ಇಂಗಳದಾಳ ಅಧ್ಯಕ್ಷೆ

20092022 yelburga GP elected
Published on


ಯಲಬುರ್ಗಾ: ಗುನ್ನಾಳ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷೆಯಾಗಿ ಶಂಕ್ರಮ್ಮ ಶರಣಪ್ಪ ಇಂಗಳದಾಳ ಮಂಗಳವಾರ ಅವಿರೋಧ ಆಯ್ಕೆಯಾದರು.

ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಶಂಕ್ರಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಶ್ರೀಶೈಲ ತಳವಾರ ಘೋಷಿಸಿದರು. ಎಲ್ಲ 21 ಸದಸ್ಯರು ಹಾಜರಾಗಿದ್ದರು. ಉಪತಹಸೀಲ್ದಾರ್ ವಿಜಯಕುಮಾರ ಗುಂಡೂರು, ಸಮೀರಕುಮಾರ, ಪಿಡಿಒ ಶರಣಗೌಡ ಪೊಲೀಸ್ ಪಾಟೀಲ್ ಚುನಾವಣೆ ಪ್ರಕ್ರಿಯೆ ನಡೆಸಿದರು. ಸರ್ವ ಸದಸ್ಯರು, ಮುಖಂಡರು ಅಧ್ಯಕ್ಷೆ ಶಂಕ್ರಮ್ಮಗೆ ಹೂಮಾಲೆ ಹಾಕಿ ಸನ್ಮಾನಿಸಿದರು. ಗ್ರಾಪಂ ಉಪಾಧ್ಯಕ್ಷೆ ಶಾಂತಮ್ಮ ಶರಣಪ್ಪ ಕಂಬಳಿ, ಪ್ರಮುಖರಾದ ಲಕ್ಷ್ಮಣಾಚಾರ್ ಜೋಶಿ, ಶರಣಪ್ಪ ಇಂಗಳದಾಳ, ಶಾಂತಯ್ಯ ಹಿರೇಮಠ, ನಿಂಗಪ್ಪ ಹಂದ್ರಾಳ, ಅಯ್ಯನಗೌಡ ಕೆಂಚಮ್ಮನವರ, ಕಲ್ಲಪ್ಪ ಇಂಗಳದಾಳ, ಫರೀದಸಾಬ್ ಹಿರೇಮನಿ, ಆನಂದ ಈಳಿಗೇರ, ಶಿವಸಂಗಪ್ಪ ಹುಚನೂರ, ವೆಂಕಟೇಶ ವಾಲ್ಮೀಕಿ, ಶರಣಪ್ಪ ನಿಲೋಗಲ್, ರಾಚಪ್ಪ ಹುರಳಿ, ಹನುಮರಡ್ಡಿ ರಡ್ಡೇರ, ಶಿವಣ್ಣ ಗಾಣಧಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net