ಪದವಿ ಪರೀಕ್ಷಾ ಶುಲ್ಕ ಕಡಿತ ಮಾಡಿ: ಯಲಬುರ್ಗಾದಲ್ಲಿ ಎಸ್‌ಎಫ್‌ಐ, ವಿದ್ಯಾರ್ಥಿಗಳ ಪ್ರತಿಭಟನೆ

27012023 yelburga sfi protest
Published on

ಯಲಬುರ್ಗಾ: ಪದವಿ ಪರೀಕ್ಷಾ ಶುಲ್ಕ ಕಡಿತ ಹಾಗೂ ಪಾವತಿಸುವ ಅವಧಿ ವಿಸ್ತರಿಸುವಂತೆ ಒತ್ತಾಯಿಸಿ ಎಸ್‌ಎಫ್‌ಐ ತಾಲೂಕು ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪಟ್ಟಣದ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ, ಪ್ರಾಚಾರ್ಯ ಎಸ್.ಜಿ.ಗುರಿಕಾರ್‌ಗೆ ಮನವಿ ಸಲ್ಲಿಸಿದರು.

ತಾಲೂಕು ಸಂಚಾಲಕ ಎಂ.ಸಿದ್ದಪ್ಪ ಮಾತನಾಡಿ, ವಿಶ್ವವಿದ್ಯಾಲಯವು ಪದವಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹೆಚ್ಚಿಸಿರುವುದು ಸರಿಯಲ್ಲ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿದೆ. ತಕ್ಷಣ ಇದನ್ನು ರದ್ದು ಪಡಿಸಬೇಕು. ಅಲ್ಲದೇ ಪರೀಕ್ಷಾ ಶುಲ್ಕದ ಅವಧಿ ವಿಸ್ತರಿಸಬೇಕು. ವಿಎಸ್‌ಕೆ ವಿವಿ ಕುಲಸಚಿವರು ಮತ್ತು ಪರೀಕ್ಷಾ ವಿಭಾಗದ ಮುಖ್ಯಸ್ಥರು ವಿದ್ಯಾರ್ಥಿಗಳ ಹಿತ ಕಾಪಾಡುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಸಂಘಟನೆ ಪದಾಧಿಕಾರಿಗಳಾದ ಸಲೀಂಸಾಬ್, ಅಲ್ಲಾಭಕ್ಷಿ., ಮಂಜುನಾಥ, ಜನಾರ್ದನ, ಗಾದಿಲಿಂಗ, ಚಾಂದ್‌ಸಾಬ್, ಮಲ್ಲಿಕಾರ್ಜುನ, ವಿದ್ಯಾರ್ಥಿಗಳಾದ ರಾಮ್, ರತ್ನಾ, ಅನ್ನಪೂರ್ಣ, ರವಿಚಂದ್ರ, ದಾವಲ್‌ಸಾಬ್, ಈರಮ್ಮ, ಸುನೀತಾ, ಅವಿನಾಶ, ಗವಿಸಿದ್ದಪ್ಪ, ಸುನೀಲ್, ಮೈನು, ಅಮೃತಾ, ಹೇಮಂತ್, ಅಶ್ವಿನಿ, ನಾಗರಾಜ್, ಕಾವ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net