

ಯಲಬುರ್ಗಾ: ಪ್ರತಿಯೊಬ್ಬರೂ ಆರೋಗ್ಯದ ಕಾಳಜಿ ವಹಿಸಲಿ ಎಂದು ತಾಪಂ ಸಹಾಯಕ ನಿರ್ದೇಶಕ ಎಫ್.ಡಿ. ಕಟ್ಟಿಮನಿ ಹೇಳಿದರು. ತಾಲೂಕಿನ ಸಂಗನಹಾಳದಲ್ಲಿ ಗ್ರಾಪಂ, ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ಆರೋಗ್ಯ ಅಮೃತ ಅಭಿಯಾನ, ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನದ ಜಲಸಂಜೀವಿನಿ ಹಾಗೂ ದೂರದೃಷ್ಟಿ ಯೋಜನೆಯ ಕಾರ್ಯಕ್ರಮ ಉದ್ಘಾಟಿಸಿ ಬುಧವಾರ ಮಾತನಾಡಿದರು. ಸರ್ಕಾರದ ಯೋಜನೆಗಳು ಕಟ್ಟ ಕಟೆಯ ವ್ಯಕ್ತಿಗೆ ತಲುಪಿದಾಗ ಮಾತ್ರ ಸಾರ್ಥಕವಾಗುತ್ತದೆ. ಜನರ ಆರೋಗ್ಯ ಹಿತದೃಷ್ಠಿಯಿಂದ ಸಾಕಷ್ಟು ಯೋಜನೆ ಜಾರಿಗೊಳಿಸಲಾಗಿದೆ. ಅವುಗಳ ಸದುಪಯೋಗವಾಗಲಿ ಎಂದರು.
ದುಡಿವ ಕೈಗೆ ಕೆಲಸ ನೀಡಲು ನರೇಗಾದಡಿ ಮತ್ತು ಜಲ ಸಂಜೀವಿನಿಯಡಿ ಮೂರು ವರ್ಷದ ಕ್ರಿಯಾಯೋಜನೆ ಸಿದ್ಧ್ದಪಡಿಲಾಗುತ್ತಿದೆ. ಮೂರು ಹಂತದ ಕಾಮಗಾರಿ ನಡೆಯಲಿದೆ. ರೈತರು ಜಮೀನಲ್ಲಿ ಜಲಮೂಲ ಸಂರಕ್ಷಣೆಗಾಗಿ ಅರ್ಜಿ ಸಲ್ಲಿಸಬಹುದು ಎಂದರು.
ನಾಲೆ, ಹಳ್ಳ, ಗೋಕಟ್ಟೆ, ಜಲಮೂಲ ಗುರುತಿಸುವ ನಕಾಶೆ ಬಿಡಿಸುವ ಮೂಲಕ ಜನರಿಗೆ ಅರಿವು ಮೂಡಿಸಲಾಯಿತು. ಗ್ರಾಪಂ ಅಧ್ಯಕ್ಷೆ ಫರಿದಾ ಬೇಗಂ, ಉಪಾಧ್ಯಕ್ಷೆ ಬಸಮ್ಮ ವಾಲ್ಮೀಕಿ, ಸದಸ್ಯರಾದ ಗಿರಿಜಮ್ಮ ಸಿದ್ದರಡ್ಡಿ, ಮಾಳಮ್ಮ ಕಟ್ಟೆಪ್ಪನವರ್, ಮಲ್ಲಪ್ಪ ಕಿನ್ನಾಳ, ದುರಗಪ್ಪ ನಡುಲಮನಿ, ಶಿವಪ್ಪ ಗದ್ದಿ, ತಾಪಂ ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ, ಪಿಡಿಒ ಪ್ರಕಾಶ, ವೈದ್ಯಾಧಿಕಾರಿ ಸೌಭಾಗ್ಯ, ಕೆಎಚ್‌ಪಿಟಿ ಆರೋಗ್ಯ ಸಿಬ್ಬಂದಿ ಕೆ.ಜೆ.ಅರ್ಪಿತಾ, ಉಮಾ, ಪ್ರಕಾಶ, ಸುಧಾ ಬಸವರಾಜ ಹಾಗೂ ಆಶಾ-ಅಂಗನವಾಡಿ ಕಾರ್ಯಕರ್ತೆಯರು ಇದ್ದರು.