

ಯಲಬುರ್ಗಾ: ಪಟ್ಟಣದ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ನಿರ್ದೇಶಕರ ಸ್ಥಾನಕ್ಕೆ ಸೋಮವಾರ ಶಾಂತಿಯುತ ಚುನಾವಣೆ ನಡೆಯಿತು.
ಬೆಳಗ್ಗೆ 9ರಿಂದ 4ರವರೆಗೆ ಒಟ್ಟು ಒಂಬತ್ತು ಸ್ಥಾನಗಳಿಗೆ ಚುನಾವಣೆ ನಡೆಯಿತು. ಸಂಜೆ 5ರಿಂದ ರಾತ್ರಿ 9ರವರೆಗೆ ಮತ ಎಣಿಕೆ ನಡೆಯಿತು. ಹಾಲಿ ಅಧ್ಯಕ್ಷ ವೈ.ಜಿ. ಪಾಟೀಲ್ ಬಣದ ಐದು ಮಂದಿ ಸೋಲು ಅನುಭವಿಸಿದರು. ಎಸ್.ವಿ.ಧರಣಾ, ಸಿದ್ದಲಿಂಗಪ್ಪ ಶ್ಯಾಗೋಟಿ ಬಣದ ಐವರು ಗೆಲುವಿನ ನಗೆ ಬೀರಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಕ್ಷೇತ್ರದಿಂದ ಸಿದ್ದಲಿಂಗಪ್ಪ ಶ್ಯಾಗೋಟಿ-347 ಮತ, ಸಂಗಯ್ಯ ಹಿರೇಮಠ-313, ಮೆಹಬೂಬ್ ಬಾದಶ-302, ಅಂತೂರ ಕಳಕಮಲ್ಲಪ್ಪ-274 ಮತ ಪಡೆದು ಗೆಲುವು ಸಾಧಿಸಿದರು. ವೈ.ಜಿ.ಪಾಟೀಲ್-132 ಮತ, ಬಾಲದಂಡಪ್ಪ ತಳವಾರ್-127, ಶೇಖರಗೌಡ ಪೊ.ಪಾಟೀಲ್-144, ಕೃಷ್ಣಾ ಪತ್ತಾರ-73 ಮತ ಪಡೆದು ಸೋಲು ಅನುಭವಿಸಿದರು. ಒಟ್ಟು 443 ಮತಗಳು ಚಲಾವಣೆಯಾಗಿದ್ದು ಇದರಲ್ಲಿ 7 ಕುಲಗೆಟ್ಟ ಮತಗಳಿದ್ದವು.
ಪದವೀಧರ ಶಿಕ್ಷಕರ ಕ್ಷೇತ್ರದಿಂದ ಪರಮೇಶ್ವರ ಚಿಂತಾಮಣಿ-309 ಮತ ಪಡೆದು ಗೆಲುವು ಸಾಧಿಸಿದರೆ, ಸಕ್ರಪ್ಪ ಕುಷ್ಟಗಿ-130 ಮತದೊಂದಿಗೆ ಸೋಲು ಕಂಡರು.
ಕೃಷಿ ಇಲಾಖೆಯ ಶಿವಾನಂದ ಮಳಗಿ-7ಮತ, ವಿನೋದ ಶಾಂತಗೇರಿ-4, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಸಂತೋಷ್ ಧರಣಾ-7 ಮತ, ರೇಣುಕಾ ಗಡಾದ-1, ಬಿಇಒ ಕಚೇರಿ ಸಂತೋಷಗೌಡ ಎಂ.-28 ಮತ, ಶಶಿಧರಗೌಡ ಎಚ್.-21, ನ್ಯಾಯಾಂಗ ಇಲಾಖೆ ಎನ್.ಲೋಕೇಶ-23 ಮತ, ಚೇತನಕುಮಾರ ಗಾಂಜಿ-20 ಮತ ಪಡೆದರು. ಹೆಚ್ಚು ಮತ ಪಡೆದವರು ಗೆಲುವಿನ ನಗೆ ಬೀರಿದರೆ ಅಲ್ಪ ಮತ ಪೆಡದವರು ಸೋಲುಂಡು ನಿರಾಶರಾದರು.
ಅವಿರೋಧ ಆಯ್ಕೆ: ರಾಜಶೇಖರಸ್ವಾಮಿ ಬೆಣಕಲ್‌ಮಠ-ಪಶು ಇಲಾಖೆ, ಸಮೀರಕುಮಾರ, ಬಸನಗೌಡ ರಾಮಶೆಟ್ಟಿ (ಕಂದಾಯ), ಶಿವಪುತ್ರಪ್ಪ ತಿಪ್ಪನಾಳ(ಪಿಡಬ್ಲುೃಡಿ-ಎನ್‌ಎಚ್), ಬಸವರಾಜ ಸಜ್ಜನ (ಜಿಲ್ಲಾ ಪಂಚಾಯಿತಿ, ಪಿಆರ್‌ಇಡಿ), ದೇವಪ್ಪ ಮುಗಳಿ, ನಿಂಗಪ್ಪ ಶೇಗುಣಸಿ (ಸರ್ಕಾರಿ ಪ್ರೌಢಶಾಲೆ), ಮರ್ತುಜಾ ಖಾದರ್‌ಸಾಬ್ ಮುಧೋಳ (ಪಿಯು ಕಾಲೇಜು), ವಿಜಯಕುಮಾರ್ (ಸಮಾಜ ಕಲ್ಯಾಣ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ), ಶಿವಶಂಕರ ಕರಡಕಲ್ (ಬಿಸಿಎಂ ಇಲಾಖೆ), ಬಸವರಾಜ ಗೋಗೇರಿ (ಅರಣ್ಯ ಇಲಾಖೆ), ಶರಣಪ್ಪ ಮಾದರ, ಶಿವಕುಮಾರ ಐನಕ್ಕಿ, ವಿದ್ಯಾಶ್ರೀ ಹೊಟ್ಟೆರ, ಶಂಕ್ರಯ್ಯ ಪುರಾಣಿಕ, ಬಸವರಾಜ ಮೆಣಸಗಿ (ಆರೋಗ್ಯ ಇಲಾಖೆ), ಮಲ್ಲಿಕಾರ್ಜುನ ದೇಶಣ್ಣವರ (ಖಜಾನೆ ಇಲಾಖೆ), ಶ್ರುತಿ ಮಾಕಾಪುರ (ಭೂಮಾಪನ ಹಾಗೂ ನೋಂದಣಿ ಇಲಾಖೆ), ಹಜರತ್ ಅಲಿಮುಲ್ಲಾ, ಫಕೀರಪ್ಪ ಕಟ್ಟಿಮನಿ, ಸತೀಶ ಹಟ್ಟಿ (ತಾಪಂ), ಚನ್ನಮ್ಮ ಶಾನಭೋಗರ (ಸಿಡಿಪಿಒ ಇಲಾಖೆ), ಬಸವರಾಜ ಅಂಗಡಿ (ಆಹಾರ ಇಲಾಖೆ), ವಿಜಯೇಂದ್ರ (ಸಹಕಾರಿ ಇಲಾಖೆ), ಮಂಜುನಾಥ ಮುರಡಿ (ಕೈಗಾರಿಕಾ ತರಬೇತಿ ಸಂಸ್ಥೆ)ಯಿಂದ ಸ್ಪರ್ಧಿಸಿ ಅವಿರೋಧ ಆಯ್ಕೆಯಾದರು.
ಒಟ್ಟು 34 ಸ್ಥಾನಗಳಲ್ಲಿ 24 ಅವಿರೋಧ ಆಯ್ಕೆಯಾಗಿದ್ದು, 9 ಸ್ಥಾನಗಳಿಗೆ ಚುನಾವಣೆ ನಡೆಯಿತು ಎಂದು ಚುನಾವಣಾಧಿಕಾರಿ ನಾಗಪ್ಪ ಸಜ್ಜನ್ ತಿಳಿಸಿದರು. 10 ಜನ ನಿವೃತ್ತ ನೌಕರರು ಚುನಾವಣಾ ಪ್ರಕ್ರಿಯೆ ನಡೆಸಿದರು.