

ಯಲಬುರ್ಗಾ: ಪಟ್ಟಣದ ಸರ್ಕಾರಿ ಉರ್ದು ಶಾಲೆ ಹಾಗೂ ಮೌಲಾನಾ ಆಜಾದ್ ಶಾಲೆಯ ಮಕ್ಕಳಿಗೆ ಶೌಚಗೃಹ ನಿರ್ಮಿಸಿಕೊಡುವಂತೆ ಒತ್ತಾಯಿಸಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ಎಸ್‌ಎಫ್‌ಐ ತಾಲೂಕು ಘಟಕ ಬಿಇಒ ಸೋಮಶೇಖರಗೌಡ ಪಾಟೀಲ್‌ಗೆ ಸೋಮವಾರ ಮನವಿ ಸಲ್ಲಿಸಿತು.
ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ಎಂ.ಸಿದ್ದಪ್ಪ ಮಾತನಾಡಿ, ಸ್ಥಳೀಯ ಉರ್ದು ಹಾಗೂ ಮೌಲಾನಾ ಆಜಾದ್ ಶಾಲೆಯಲ್ಲಿ ಶೌಚಗೃಹ ಇಲ್ಲದೇ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈ ಮುಂಚೆ ಇದ್ದ ಶೌಚಗೃಹ ನೆಲಸಮ ಮಾಡಿದ್ದು, ನಿತ್ಯ ಬಯಲಿಗೆ ಹೋಗುವ ಪರಿಸ್ಥಿತಿ ಇದೆ. ಕೂಡಲೇ ಶಾಲೆ ಆವರಣದಲ್ಲಿ ಸುಸಜ್ಜಿತ ಶೌಚಗೃಹ ನಿರ್ಮಿಸಿ ಮಕ್ಕಳಿಗೆ ಅನುಕೂಲ ಕಲ್ಪಿಸಬೇಕು. ಇಲ್ಲವಾದರೆ ಸಂಘಟನೆಯಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಸ್.ವಿ.ಧರಣಾ, ಪಪಂ ಸದಸ್ಯ ರಿಯಾಜ್ ಅಹ್ಮದ್ ಖಾಜಿ, ಬಿಆರ್‌ಸಿ ಅಶೋಕ ಗೌಡರ, ಪಾಲಕರಾದ ರೆಹಮನ್‌ಸಾಬ್ ಎಲಿಗಾರ, ಮಹಮ್ಮದ್ ಗೌಸ್, ಅಹಮದ್ ಪಾಷಾ, ಶರಣಪ್ಪ ನಿಡಗುಂದಿ, ಮಹಮ್ಮದ್ ರಫಿಕ್, ರಾಷಿದ್ ಖಾಜಿ, ಬಾಬುಸಾಬ್ ವಣಗೇರಿ, ಮೈನುದಿನ್, ಹುಸೇನ್ ನೀಲಗಾರ, ಇಮಾಮ್‌ಹುಸೇನ್ ಇತರರಿದ್ದರು.