ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿ

background (3)
Published on

ಯಲಬುರ್ಗಾ: ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಕೊಡಿಸಲು ಪಾಲಕರು ಮುಂದಾಗಲಿ ಎಂದು ಪ್ರೌಢಶಾಲೆಯ ಮುಖ್ಯಶಿಕ್ಷಕ ನಾಗಭೂಷಣ ಚಿನಿವಾಲ ಹೇಳಿದರು.

ತಾಲೂಕಿನ ಗೆದಗೇರಿ ಗ್ರಾಮದ ಶರಣ ಬಸವೇಶ್ವರ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದ ಗೆಳೆಯರ ಬಳಗ ಬುಧವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮದ ಪ್ರೌಢಶಾಲೆಯ ಮಕ್ಕಳು ಶಾಲೆಗೆ ನಿರಂತರ ಗೈರು ಹಾಜರು ಆಗುತ್ತಿದ್ದಾರೆ. ಪಾಲಕರು ಮಕ್ಕಳನ್ನು ಹೊಲದ ಕೆಲಸಗಳಿಗೆ ಕಳಿಸಬಾರದು. ಅವರಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು. ಆಗ ಅವರು ಉನ್ನತ ಸ್ಥಾನಗಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಉದ್ಯಮಿ ಸುಭಾಸ್ ರಾಜೂರ ಮಾತನಾಡಿ, ಮಕ್ಕಳಿಗಾಗಿ ಆಸ್ತಿ ಮಾಡಬೇಡಿ. ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ. ಅವರಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ಕೊಡುವ ಮೂಲಕ ಉನ್ನತ ಅಧಿಕಾರಿಯನ್ನಾಗಿ ಮಾಡಲು ಪಾಲಕರು ಮುಂದಾಗಲಿ ಎಂದರು.

ಓದುವ ವಯಸ್ಸಿನಲ್ಲಿ ಪ್ರೀತಿ, ಪ್ರೇಮ ಎಂದು ಸಮಯ ಹಾಳು ಮಾಡಿಕೊಳ್ಳಬಾರದು. ಚೆನ್ನಾಗಿ ಓದಿ ದೇಶದ ಅತ್ಯುನ್ನತ ಸಾಧನೆ ಮಾಡಬೇಕು. ಗುರುಗಳಿಗೆ ಹಾಗೂ ಪಾಲಕರಿಗೆ ಕೀರ್ತಿ ತರುವ ಕೆಲಸ ಮಾಡಿ ಎಂದು ಹೇಳಿದರು.

ಯಲಬುರ್ಗಾ ಪೊಲೀಸ್ ಠಾಣೆಯ ಸಿಪಿಐ ಮೌನೇಶ್ ಪಾಟೀಲ್ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಶರಣಪ್ಪ ಕೊಪ್ಪದ, ಪ್ರಮುಖರಾದ ಬಸವರಾಜ ಮಾಸ್ತಿ, ರಮೇಶ್ ದೇಶಪಾಂಡೆ, ರುದ್ರಪ್ಪ ಇಟಗಿ, ರುದ್ರಪ್ಪ ನಡುವಿನಮನಿ, ಶಿವಯ್ಯ ಹಿರೇಮಠ, ಚನ್ನಪ್ಪಇಟಗಿ ಮಂಜುನಾಥ್ ಮಾಸ್ತಿ ಗ್ರಾಮದ ಗುರುಹಿರಿಯರು, ಕಲಾವಿದರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net