ವನ್ಯಜೀವಿಗಳ ಸಂರಕ್ಷಣೆ ಎಲ್ಲರ ಹೊಣೆ

07102022 yelburga forest ustava
Published on

ಯಲಬುರ್ಗಾ: ಜೀವವೈವಿಧ್ಯತೆ ಮತ್ತು ವನ್ಯಜೀವಿಗಳ ಸಂರಕ್ಷಣೆ ಎಲ್ಲರ ಹೊಣೆ ಎಂದು ಕೊಪ್ಪಳ ಉಪ ವಲಯ ಅರಣ್ಯಾಧಿಕಾರಿ ಪ್ರಕಾಶ ಪವಾಡಿಗೌಡ್ರ ಹೇಳಿದರು.

ಪಟ್ಟಣದ ಗವಿಸಿದ್ಧೇಶ್ವರ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಹಾಗೂ ನರ್ಸಿಂಗ್ ಸೈನ್ಸ್ ಕಾಲೇಜಿನಲ್ಲಿ ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ವನ್ಯಜೀವಿ ಸಪ್ತಾಹ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಪರಿಸರ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ವನ್ಯಜೀವಿಗಳ ರಕ್ಷಣೆಗೆ ಅರಣ್ಯ ಇಲಾಖೆ ಜತೆ ಸಾರ್ವಜನಿಕರು ಕೈಜೋಡಿಸಬೇಕು. ಕಾಡುಪ್ರಾಣಿಗಳ ಮಹತ್ವ ಅರಿಯಬೇಕು. ಪರಿಸರ ಮನುಷ್ಯನಷ್ಟೇ ಪ್ರಾಣಿಗಳಿಗೂ ಅವಶ್ಯ. ಮುಂದಿನ ಪೀಳಿಗೆಗಾಗಿ ವನ್ಯಜೀವಿಗಳ ರಕ್ಷಣೆಗೆ ಪ್ರತಿಯೊಬ್ಬರೂ ಪಣ ತೊಡಗಬೇಕು ಎಂದರು. ಅರಣ್ಯ ರಕ್ಷಕ ಷರೀಫ್ ಕೊತ್ವಾಲ್, ಉಪವಲಯ ಅರಣ್ಯಾಧಿಕಾರಿ ಅಂದಪ್ಪ ಕುರಿ ಮಾತನಾಡಿದರು. ವನ್ಯಜೀವಿಗಳ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ಆಡಳಿತಾಧಿಕಾರಿ ರಂಗನಾಥ ವಲ್ಮಕೊಂಡಿ, ಪ್ರಾಚಾರ್ಯ ಪ್ರಾಣೇಶ ವಲ್ಮಕೊಂಡಿ, ಸಿಬ್ಬಂದಿ ಸುಷ್ಮಿತಾ ಬಂಡಿಹಾಳ, ಸುಧಾ ಗುಡ್ಲಾನೂರು, ಸಂಜೀವಿನಿ, ವಿದ್ಯಾವತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net