ಉಚಿತ ಸಿಇಟಿ ತರಬೇತಿ ಪ್ರಯೋಜನ ಪಡೆಯಿರಿ: ಯಲಬುರ್ಗಾ ಬಿಇಒ ಬಿ.ಮೌನೇಶ ಕಿವಿಮಾತು

05042022 yelburga cet coching
Published on

ಯಲಬುರ್ಗಾ: ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಹಿತದೃಷ್ಟಿಯಿಂದ ಉಚಿತ ಸಿಇಟಿ ತರಬೇತಿ ಆಯೋಜಿಸಿದ್ದು, ಅಭ್ಯರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಬಿಇಒ ಬಿ.ಮೌನೇಶ ಹೇಳಿದರು.

ಪಟ್ಟಣದ ಬಿಆರ್‌ಸಿ ಕಚೇರಿಯಲ್ಲಿ ಶಿಕ್ಷಣ ಇಲಾಖೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಉಚಿತ ಸಿಇಟಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಸರ್ಕಾರ 6 ರಿಂದ 8ನೇ ತರಗತಿಗಳಿಗೆ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಾಗಿ ಅರ್ಜಿ ಆಹ್ವಾನಿಸಿದೆ. ಕೊಪ್ಪಳ ಜಿಲ್ಲೆಯಲ್ಲಿ 557 ಹುದ್ದೆಗಳು ಖಾಲಿ ಇವೆ. ಕನ್ನಡ, ಇಂಗ್ಲಿಷ್, ಗಣಿತ, ಹಾಗೂ ಸಮಾಜ ವಿಜ್ಞಾನ ವಿಷಯವಾರು ಶಿಕ್ಷಕರ ಹುದ್ದೆಗಾಗಿ ಟಿಇಟಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ 41 ದಿನ ಕಾಲ ಸಿಇಟಿ ತರಬೇತಿ ಆಯೋಜಿಸಲಾಗಿದೆ. ಇದು ಶಿಕ್ಷಕರ ನೇಮಕಾತಿಗೆ ಅನುಕೂಲವಾಗುವ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆ ಹೇಗೆ ಎದುರಿಸಬೇಕು ಎಂಬುದರ ಮಾಹಿತಿ ಸಿಗಲಿದೆ ಎಂದರು. ಶಿಕ್ಷಣಾಧಿಕಾರಿ ಎಚ್.ಎಸ್.ಮೇಟಿ ಮಾತನಾಡಿದರು. ಪ್ರಭಾರ ಕ್ಷೇತ್ರ ಸಮನ್ವಯಾಧಿಕಾರಿ ಬಸವರಾಜ ಅಂಗಡಿ, ಸಂಪನ್ಮೂಲ ವ್ಯಕ್ತಿಗಳಾದ ಆರ್.ಎಚ್.ಕುರಡಗಿ, ಬಸವರಾಜ, ಪ್ರಭಯ್ಯ, ದುರಗಪ್ಪ, ಹನುಮಂತಪ್ಪ, ಮುಖ್ಯಶಿಕ್ಷಕ ಬಸವರಾಜ ಮಾಸ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net