80 ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

27042020 Yelburga Food Kit Distrubution
Published on

ಯಲಬುರ್ಗಾ: ತಾಲೂಕಿನ ಮುಧೋಳ ಗ್ರಾಮದ ಅಕ್ಕಮಹಾದೇವಿ ಬಣಜಿಗರ ಕ್ಷೇಮಾಭಿವೃದ್ಧಿ ಸಂಘ 80 ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ಸೋಮವಾರ ವಿತರಿಸಿತು.

ಕಿಟ್ ನೀಡಿದ ಸಮುದಾಯದ ಅಧ್ಯಕ್ಷ ಗುರಪ್ಪ ಬೆಲ್ಲದ ಮಾತನಾಡಿ, ಗ್ರಾಮದ 80 ಬಡ ಕುಟುಂಬಗಳ ಮನೆ ಮನೆಗೆ ತೆರಳಿ ಆಹಾರದ ಕಿಟ್ ತಲುಪಿಸಿದ್ದೇವೆ. ತೀರಾ ಬಡವರು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಈ ವಿತರಣೆ ಮಾಡಲಾಗಿದೆ. ಲಾಕ್‌ಡೌನ್ ಅಂತ್ಯದವರೆಗೂ ಸರ್ಕಾರದ ಆದೇಶ ಪಾಲಿಸುವುದರ ಜತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಲಿ ಎಂದರು.

ಪಿಡಿಒ ಎಫ್.ಡಿ.ಕಟ್ಟಿಮನಿ, ಅಗ್ನಿಶಾಮಕ ಠಾಣಾಧಿಕಾರಿ ಕೆ.ಜನಾರ್ಧನರಾವ್, ಪ್ರಮುಖರಾದ ಚಿದಾನಂದ ಕಜ್ಜಿ, ಉಮೇಶ ವುವೇಕಿ, ಗುಡುದೀರಪ್ಪ ಕಜ್ಜಿ, ಸುರೇಶ ಜತ್ತಿ, ವೀರಣ್ಣ ತಮ್ಮಿನಾಳ, ವಿರುಪಾಕ್ಷಪ್ಪ ಮೆಣಸಿನಕಾಯಿ, ಬಸವರಾಜ ಹವಳಿ, ಛತ್ರಪ್ಪ ಛಕವಾದಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net