ಆರ್ಥಿಕ ನೆರವು ನೀಡುವಂತೆ ಒತ್ತಾಯಿ ಕುಂಬಾರ ಕ್ಷೇಮಾಭಿವೃದ್ಧಿ ಸಂಘ ತಹಸೀಲ್ದಾರಗೆ ಮನವಿ

16052020 Yelburga Pottery community Appeal
Published on

ಯಲಬುರ್ಗಾ: ಕುಂಬಾರ ಸಮುದಾಯಕ್ಕೆ ಆರ್ಥಿಕ ನೆರವು ಹಾಗೂ ಆಹಾರ ಸಾಮಗ್ರಿ ಕಿಟ್ ವಿತರಿಸುವಂತೆ ಒತ್ತಾಯಿಸಿ ಕುಂಬಾರ ಕ್ಷೇಮಾಭಿವೃದ್ಧಿ ಸಂಘವು ತಹಸೀಲ್ದಾರ್ ಶ್ರೀಶೈಲ ತಳವಾರ್‌ಗೆ ಶನಿವಾರ ಮನವಿ ಸಲ್ಲಿಸಿತು.

ಸಮುದಾಯದ ಮುಖಂಡ ಶಿವರಾಜ ಕುಂಬಾರ್ ಮಾತನಾಡಿ, ಕುಂಬಾರಿಕೆ ವೃತ್ತಿ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಸಮುದಾಯಕ್ಕೆ ಕೊವಿಡ್-19 ಪರಿಣಾಮದಿಂದ ಆರ್ಥಿಕ ಸಂಕಷ್ಟ ಎದುರಾಗಿದೆ. ಕರೊನಾ ಹಿನ್ನೆಲೆಯಲ್ಲಿ ವೃತ್ತಿಗೆ ಹಿನ್ನಡೆಯಾಗಿದ್ದು, ಕುಟುಂಬ ನಿರ್ವಹಣೆ ಕಷ್ಟವಾಗಿದೆ. ತಾಲೂಕಿನಲ್ಲಿ 250 ಹಾಗೂ ಪಟ್ಟಣದಲ್ಲಿ 25ಕ್ಕೂ ಅಧಿಕ ಕುಂಬಾರ ಸಮುದಾಯದ ಕುಟುಂಬಗಳಿದ್ದು, ಸರ್ಕಾರ ಘೋಷಣೆ ಮಾಡಿದ ಪ್ಯಾಕೇಜ್‌ನಲ್ಲಿ ಕುಂಬಾರ ಸಮುದಾಯಕ್ಕೆ 5 ಸಾವಿರ ನೆರವು ಮತ್ತು ಆಹಾರ ಸಾಮಗ್ರಿ ಕಿಟ್ ವಿತರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಸಮುದಾಯದ ಪ್ರಮುಖರಾದ ಸಿದ್ದಪ್ಪ ಕುಂಬಾರ್, ಉಮೇಶ ಕುಂಬಾರ್, ಸಂಗಪ್ಪ ಕುಂಬಾರ್, ಬಸು ಕುಂಬಾರ್, ಗಣೇಶ ಹಾಗೂ ಸಮುದಾಯದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net