ನಟ ಪುನೀತ್ ಸಾಧನೆ ಸ್ಮರಣೀಯ

PUNEETH RAJAKUMAR
ಯಲಬುರ್ಗಾದಲ್ಲಿ ಚಿತ್ರನಟ ದಿ.ಪುನೀತ್ ರಾಜಕುಮಾರ ಪುಣ್ಯಸ್ಮರಣೆ ಅಂಗವಾಗಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಪಪಂ ಸದಸ್ಯ ವಸಂತಕುಮಾರ ಭಾವಿಮನಿ, ಮುಖ್ಯಾಧಿಕಾರಿ ನಾಗೇಶ, ಪ್ರಮುಖರಾದ ವೀರಣ್ಣ ಹುಬ್ಬಳ್ಳಿ, ಶರಣಪ್ಪ ಈಳಿಗೇರ್, ಮಂಜುನಾಥ ಅಧಿಕಾರಿ, ವಿಕಾಸಗೌಡ ಉಳ್ಳಾಗಡ್ಡಿ, ರಾಮಣ್ಣ ಹೊಸಮನಿ, ಶ್ರೀಕಾಂತ ಬುಡ್ಡನಗೌಡ್ರ ಇದ್ದರು.
Published on

ಯಲಬುರ್ಗಾ: ಚಿತ್ರನಟ ಪುನೀತ್ ರಾಜಕುಮಾರ ಬದುಕಿನುದ್ದಕ್ಕೂ ನಟನೆಯ ಜತೆಗೆ ಪುಣ್ಯದ ಕಾರ್ಯ ಮಾಡಿದ್ದಾರೆ. ಅವರ ಸಾಧನೆ ಎಂದಿಗೂ ಸ್ಮರಣೀಯ ಎಂದು ತಾಪಂ ಮಾಜಿ ಸದಸ್ಯ ಶರಣಪ್ಪ ಈಳಿಗೇರ್ ಹೇಳಿದರು.

ನಟ ದಿ.ಪುನೀತ್ ರಾಜಕುಮಾರ ಅವರ ಮೂರನೇ ವರ್ಷದ ಪುಣ್ಯಸ್ಮರಣೆ ನಿಮಿತ್ತ ಪಟ್ಟಣದ (ಕನ್ನಡ ಕ್ರಿಯಾ ಸಮಿತಿ) ಅಪ್ಪು ಸರ್ಕಲ್ ಬಳಿ ಇರುವ ಪುನೀತ್ ರಾಜಕುಮಾರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಂಗಳವಾರ ಮಾತನಾಡಿದರು.

ಬಾಲ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಪುನೀತ್, ಕನ್ನಡ ಚಿತ್ರರಂಗ ಬೆಳೆಯುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ತಂದೆ ರಾಜಕುಮಾರಂತೆ ನಟನೆಯಿಂದ ಜನರ ಹೃದಯ ಗೆದ್ದಿದ್ದಾರೆ. ಅವರ ಅಗಲಿಗೆಯಿಂದ ನೋವು ಉಂಟಾಗಿದೆ. ಅವರು ಮಾಡಿರುವಂಥ ಕೆಲಸ ಶಾಶ್ವತವಾಗಿ ಉಳಿದಿವೆ. ಇಂಥ ಶ್ರೇಷ್ಠ ನಟರ ತತ್ವಾದರ್ಶಗಳು ಸಮಾಜಕ್ಕೆ ಸ್ಫೂರ್ತಿದಾಯಕವಾಗಿವೆ ಎಂದರು.

ಹಿರಿಯ ಮುಖಂಡ ವೀರಣ್ಣ ಹುಬ್ಬಳ್ಳಿ ಮಾತನಾಡಿ, ನಟ ಅಪ್ಪು ಮಾಡಿದಂತಹ ಒಳ್ಳೆಯ ಎಲ್ಲರಿಗೂ ಪ್ರೇರಣೆಯಾಗಿವೆ. ರಾಜ್ಯಾದ್ಯಂತ ಅಭಿಮಾನಿಗಳು ಅವರ ಹಸರಿನಲ್ಲಿ ಸಮಾಜಮುಖಿ ಕಾರ್ಯ ಕೈಗೊಂಡಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಪಪಂ ಸದಸ್ಯ ವಸಂತಕುಮಾರ ಭಾವಿಮನಿ, ಮುಖ್ಯಾಧಿಕಾರಿ ನಾಗೇಶ, ಅಪ್ಪು ಅಭಿಮಾನಿಗಳಾದ ಮಂಜುನಾಥ ಅಧಿಕಾರಿ, ವಿಕಾಸಗೌಡ ಉಳ್ಳಾಗಡ್ಡಿ, ರಾಮಣ್ಣ ಹೊಸಮನಿ, ಶ್ರೀಕಾಂತ ಬುಡ್ಡನಗೌಡ್ರ, ವಿಜಯ ಜಕ್ಕಲಿ, ಶಂಕರ ತೆಂಗಿನಕಾಯಿ, ಶಿವಕುಮಾರ ಭಾವಿಮನಿ, ಈರಪ್ಪ ಬಣಕಾರ, ಮಂಜುನಾಥ ಗೊಂದಳೆ, ಶಿವು ಸಾದರ್‌ಖಾನ್, ಜಾನ್ ಬಣಕಾರ, ನವೀನ ಮಾಟೂರ, ಪರಶುರಾಮ ಸಂಗನಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net