

ಯಲಬುರ್ಗಾ: ವಚನ ಸಾಹಿತ್ಯದ ಪಿತಾಮಹ ಡಾ.ಫ.ಗು.ಹಳಕಟ್ಟಿಯವರ ಆದರ್ಶ ಎಲ್ಲರಿಗೂ ಅನುಕರಣೀಯ ಎಂದು ತಾಪಂ ಇಒ ಸಂತೋಷ್ ಪಾಟೀಲ್ ಹೇಳಿದರು.
ಪಟ್ಟಣದ ತಾಪಂ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಫ.ಗು.ಹಳಕಟ್ಟಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶರಣರ ವಚನಗಳನ್ನು ಸಂಗ್ರಹಿಸಿ, ಅನುವಾದಿಸಿ ವಚನ ಸಾಹಿತ್ಯವನ್ನು ಜಗತ್ತಿಗೆ ಹಂಚಿದ ಶ್ರೇಯಸ್ಸು ಹಳಕಟ್ಟಿಯವರಿಗೆ ಸಲ್ಲುತ್ತದೆ. ಇಂದಿನ ಯುವಜನಾಂಗ ವಚನಗಳ ಅಧ್ಯಯನ ಮಾಡುವುದು ಅವಶ್ಯವಿದೆ. ಹಳಕಟ್ಟಿಯವರ ಸಾಧನೆ ಸಾರ್ವಕಾಲಿಕ ಶ್ರೇಷ್ಠವಾಗಿದೆ. ಹೀಗಾಗಿ ಅವರ ಆದರ್ಶ ಎಲ್ಲರೂ ಪಾಲಿಸಬೇಕು. ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವಾಗಬೇಕು ಎಂದರು.ವ್ಯವಸ್ಥಾಪಕ ಚಂದ್ರಶೇಖರ ಹಿರೇಮಠ, ನೌಕರರಾದ ಹಜರತ್ಅಲಿ, ಸತೀಶ ಹಟ್ಟಿ, ಬಸವರಾಜ ಹಳ್ಳಿ, ಪವನ್, ಉಮೇಶ ಭೂಮೋಜಿ, ಬಾಬು, ಪಾರಮ್ಮ, ಹುಸೇನ್, ಗಿರೀಶ, ಶೇಖಪ್ಪ ಉಪ್ಪಾರ, ಪ್ರಶಾಂತ ಬಡಿಗೇರ್ ಮತ್ತಿತರರಿದ್ದರು.