

ಯಲಬುರ್ಗಾ: ಕಾರ್ಮಿಕರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.
ಪಟ್ಟಣದ ಬುದ್ಧ ಬಸವ ಅಂಬೇಡ್ಕರ್ ಭವನದಲ್ಲಿ ತಾಲೂಕಾಡಳಿತ, ತಾಪಂ, ಪಪಂ ಹಾಗೂ ಕಾರ್ಮಿಕ ಇಲಾಖೆ ಶನಿವಾರ ಹಮ್ಮಿಕೊಂಡಿದ್ದ ನೋಂದಾಯಿತ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಕಿಟ್ ಹಾಗೂ ಇತರ ಸೌಲಭ್ಯಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯಲಬುರ್ಗಾ ತಾಲೂಕಿನಲ್ಲಿ 14,319, ಕುಕನೂರಿನಲ್ಲಿ 12,287 ನೋಂದಾಯಿತ ಕಾರ್ಮಿಕರಿದ್ದು, ಅವಶ್ಯವಿರುವ ಇನ್ನೂ ಹೆಚ್ಚಿನ ಕಿಟ್‌ಗಳನ್ನು ನೀಡುವಂತೆ ಸಚಿವ ಶಿವರಾಮ್ ಹೆಬ್ಬಾರ್‌ಗೆ ತಿಳಿಸಲಾಗಿದೆ. ಇನ್ನೂ 25 ಸಾವಿರಕ್ಕೂ ಅಧಿಕ ಯುವಕರು, ತಾಯಂದಿರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿತರಾಗಿ ಸೌಲಭ್ಯ ಪಡೆಯಬೇಕು ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ವೀಣಾ ಮಾಸ್ತಿ ಮಾತನಾಡಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಕಳಕಪ್ಪ ತಳವಾರ್, ಸದಸ್ಯರಾದ ವಸಂತ ಭಾವಿಮನಿ, ಅಶೋಕ ಅರಕೇರಿ, ಗ್ರೇಡ್ 2 ತಹಸೀಲ್ದಾರ್ ನಾಗಪ್ಪ ಸಜ್ಜನ, ಕಾರ್ಮಿಕ ನಿರೀಕ್ಷಕರಾದ ಶಿವಶಂಕರ ತಳವಾರ್, ಗೋಪಾಲ ಧೂಪದ, ಬಾಲಕಾರ್ಮಿಕ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ, ಪಪಂ ಸಿಒ ಶಿವಕುಮಾರ ಕಟ್ಟಿಮನಿ, ಪ್ರಮುಖರಾದ ನಿರ್ಮಲಮ್ಮ, ಶಿವಪ್ಪ ವಾದಿ, ಶರಣಪ್ಪ ಈಳಿಗೇರ್, ಸಂಗಪ್ಪ ಬಂಡಿ, ಸಿದ್ರಾಮೇಶ ಬೇಲೇರಿ, ಈರಪ್ಪ ಬಣಕಾರ, ಬಸನಗೌಡ ತೊಂಡಿಹಾಳ, ಕಳಕಪ್ಪ ಕಂಬಳಿ ಇತರರಿದ್ದರು.