

ಯಲಬುರ್ಗಾ: ತಾಲೂಕಿನ ಸುಕ್ಷೇತ್ರ ಚಿಕ್ಕವಂಕಲಕುಂಟಾದಲ್ಲಿ ನಿರ್ಮಾಣವಾಗುತ್ತಿರುವ ಬುದ್ಧ ಬಸವ ಅಂಬೇಡ್ಕರ್ ಭವನ ಕಾಮಗಾರಿ ಸ್ಥಳಕ್ಕೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಬಳಿಕ ಮಾತನಾಡಿದ ರಾಯರಡ್ಡಿ, ಹಿರೇವಂಕಲಕುಂಟಾ ಹೋಬಳಿ ಜನರಿಗೆ ಅನುಕೂಲಕ್ಕಾಗಿ ಕೆಕೆಆರ್‌ಡಿಬಿ ಯೋಜನೆಯಡಿ ಅಂದಾಜು 8 ಕೋಟಿ ರೂ. ವೆಚ್ಚದಲ್ಲಿ ಬುದ್ಧ ಬಸವ ಅಂಬೇಡ್ಕರ್ ಭವನ ನಿರ್ಮಾಣವಾಗುತ್ತಿದ್ದು, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕಾಮಗಾರಿ ಗುಣಮಟ್ಟದಿಂದ ನಡೆಸಬೇಕು. ಸುಸಜ್ಜಿತ ಭವನ ನಿರ್ಮಾಣದಿಂದ ಈ ಭಾಗದ ಜನರಿಗೆ ಸಭೆ ಸಮಾರಂಭ ಇತರ ಕಾರ್ಯಕ್ರಮ ಕೈಗೊಳ್ಳಲು ಹೆಚ್ಚು ಅನುಕೂಲವಾಗಲಿದೆ. ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಚಿಕ್ಕವಂಕಲಕುಂಟಾ ಧಾರ್ಮಿಕ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ. ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು. ರಾಜ್ಯ ಸರ್ಕಾರದಲ್ಲಿ ಅಭಿವೃದ್ಧಿಗೆ ಅನುದಾನದ ಕೊರತೆ ಇಲ್ಲ. ಈ ಕಾರ್ಯಕ್ಕೆ ಬೇಕಿರುವ ಭೂಮಿ ನೀಡಲು ಜನರು ಮುಂದಾಗಬೇಕು ಎಂದರು.
ಇದೇ ವೇಳೆ ಪಿಡಬ್ಲುೃಡಿ ಇಇ ಹೇಮಂತರಾಜ ಅವರು ಕಾಮಗಾರಿ ಬಗ್ಗೆ ಶಾಸಕರಿಗೆ ವಿವರಣೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಪಿಡಬ್ಲುೃಡಿ ಎಇಇ ಮಲ್ಲಿಕಾರ್ಜುನ, ಇಂಜಿನಿಯರ್ ರಾಜಶೇಖರ ಮಳಿಮಠ, ದೇವಸ್ಥಾನ ಸಮಿತಿ ವ್ಯವಸ್ಥಾಪಕ ಚಂದಪ್ಪ ಕುರಿ, ಮುಖಂಡರಾದ ಯಂಕಣ್ಣ ಯರಾಶಿ, ರಾಘವೇಂದ್ರಾಚಾರ್ ಜೋಶಿ, ಮಹೇಶ ಹಳ್ಳಿ, ಬಸವರಾಜ ಹಿರೇಮನಿ, ಆದೇಶ ರೊಟ್ಟಿ, ಪ್ರಕಾಶ ಮಾಲಿಪಾಟೀಲ್, ಲಂಕೆಪ್ಪ, ಪ್ರಭು ಬಡಿಗೇರ, ಶ್ರೀಕಾಂತ್ ಹಳ್ಳಿ ಇತರರಿದ್ದರು.