ವಿಶ್ವೇಶ್ವರಯ್ಯ ಕೌಶಲಕ್ಕೆ ಪ್ರಪಂಚದ ಮೆಚ್ಚುಗೆ

15092021 Yelburga Engineers Day
Published on

ಯಲಬುರ್ಗಾ: ಸಮಾಜದಲ್ಲಿ ಇಂಜಿನಿಯರ್ ವೃತ್ತಿಗೆ ವಿಶೇಷ ಗೌರವವಿದೆ ಎಂದು ಲೋಕೋಪಯೋಗಿ ಇಲಾಖೆ ಎಇಇ ಪಿ.ಹೇಮಂತರಾಜ ಹೇಳಿದರು.

ಪಟ್ಟಣದ ಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ಇಂಜಿನಿಯರ್ ದಿನಾಚರಣೆ ಅಂಗವಾಗಿ ಸರ್.ಎಂ.ವಿಶ್ವೇಶ್ವರಯ್ಯ ಭಾವಚಿತ್ರಕ್ಕೆ ಬುಧವಾರ ಪೂಜೆ ಸಲ್ಲಿಸಿ ಮಾತನಾಡಿದರು. ವಿಶ್ವೇಶ್ವರಯ್ಯ ದಕ್ಷತೆ ಮತ್ತು ಪ್ರಾಮಾಣಿಕತೆ ಮೂಲಕ ಇಂಜಿನಿಯರ್ ವೃತ್ತಿಗೆ ಗೌರವ ತಂದುಕೊಟ್ಟರು. ಕೆಆರ್‌ಎಸ್‌ನಂತಹ ಬೃಹತ್ ನೀರಾವರಿ ಯೋಜನೆ ಅವರ ಪ್ರತಿಭೆಗೆ ನಿದರ್ಶನವಾಗಿದೆ. ಅವರ ತಾಂತ್ರಿಕತೆಯ ಕೌಶಲ ಪ್ರಪಂಚವೇ ತಿರುಗಿ ನೋಡುವಂತೆ ಮಾಡಿದೆ. ಅವರ ಕೆಲಸಗಳು ಇಂದಿಗೂ ಜೀವಂತವಾಗಿವೆ. ಕೈಗಾರಿಕೆ ತಂತ್ರಜ್ಞಾನದ ಮೂಲಕ ದೇಶದ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ ಎಂದರು.

ಇಂಜಿನಿಯರ್‌ಗಳಾದ ಶರಣಬಸವರಾಜ, ಸಚಿನ್ ಪಾಟೀಲ್, ಎಸ್.ಗುರುರಾಜ, ವ್ಯವಸ್ಥಾಪಕ ಮಹಾಂತೇಶ ಹಿರೇಮಠ, ಸಿಬ್ಬಂದಿ ಶಿವಪುತ್ರಪ್ಪ ತಿಪ್ಪನಾಳ, ಎಂ.ಬಸವರಾಜ, ಆನಂದ ತುಪ್ಪದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net