ಎಲ್ಲ ರೋಗಕ್ಕೂ ಆಯುರ್ವೇದವೇ ಮದ್ದು

AYURVEDA
ಯಲಬುರ್ಗಾದ ತಹಸಿಲ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ 9ನೇ ಆಯುರ್ವೇದ ದಿನ ಕಾರ್ಯಕ್ರಮದಲ್ಲಿ ಆಯುಷ್ ತಜ್ಞವೈದ್ಯೆ ಶಿಲ್ಪಾ ಬಾಚಲಾಪುರ ಮಾತನಾಡಿದರು. ಗ್ರೇಡ್ 2 ತಹಸೀಲ್ದಾರ್ ವಿ.ಎಚ್.ಹೊರಪೇಟಿ, ಉಪತಹಸೀಲ್ದಾರ್ ವಿಜಯಕುಮಾರ ಗುಂಡೂರು, ಶಿರಸ್ತೇದಾರ್ ಮಲ್ಲಿಕಾರ್ಜುನ ಶಾಸ್ತ್ರಿಮಠ, ವೈದ್ಯರಾದ ವಿವೇಕ, ವಿ.ಆರ್.ತಾಳಿಕೋಟಿ ಇದ್ದರು.
Published on

ಯಲಬುರ್ಗಾ: ಬದಲಾದ ಜೀವನಶೈಲಿ, ಆಹಾರ ಪದ್ಧತಿಯಿಂದಾಗಿ ಮನುಷ್ಯರಲ್ಲಿ ಅನಾರೋಗ್ಯ ಕಾಣಿಸಿಕೊಳ್ಳುತ್ತಿದೆ. ಆಯುರ್ವೇದ ಚಿಕಿತ್ಸಾ ವಿಧಾನ ಉತ್ತಮವಾಗಿದ್ದು, ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿದೆ ಎಂದು ಆಯುಷ ಇಲಾಖೆ ತಜ್ಞವೈದ್ಯೆ ಶಿಲ್ಪಾ ಬಾಚಲಾಪುರ ಹೇಳಿದರು.

ಪಟ್ಟಣದ ತಹಸಿಲ್ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆಯುಷ ಇಲಾಖೆಯಿಂದ ಧನ್ವಂತರಿ ಜಯಂತಿ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ 9ನೇ ಆಯುರ್ವೇದ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಕೃತಿಯಲ್ಲಿ ಎಲ್ಲ ರೋಗಗಳಿಗೂ ಮದ್ದು ಇದೆ. ಗುಣವಾಗದ ಕಾಯಿಲೆಗಳಿಗೆ ಗಿಡಮೂಲಿಕೆ ರಾಮಬಾಣವಾಗಿದೆ. ನಿತ್ಯದ ಜೀವನ ಶೈಲಿಯಲ್ಲಿ ಆಯುರ್ವೇದ ಪದ್ಧತಿ ಅಳವಸಿಕೊಳ್ಳಬೇಕು. ಆಹಾರ ಸೇವಿಸುವಾಗ ಏಕಾಗ್ರತೆ ಇರಬೇಕು. ಆಹಾರದಲ್ಲಿ ಸಿರಿಧಾನ್ಯ ಉಪಯೋಗಿಸಬೇಕು. ಧ್ಯಾನಕ್ಕೆ ಆದ್ಯತೆ ನೀಡಬೇಕು. ಆಯುರ್ವೇದ ಪದ್ಧತಿಯನ್ನು ವಿದೇಶಿಯರು ಕೂಡ ಪಾಲಿಸುತ್ತಿದ್ದಾರೆ ಎಂದರು.

ಹೋಮಿಯೋಪತಿ ತಜ್ಞವೈದ್ಯ ಡಾ.ವಿವೇಕ್ ಮಾತನಾಡಿ, ಭಾರತೀಯ ವೈದ್ಯ ಪದ್ಧತಿಯಲ್ಲಿ ಹೋಮಿಯೋಪತಿಗೆ ಮನ್ನಣೆ ಇದೆ. ಇದರ ಉಪಯೋಗ ಪಡೆಯುವ ಮೂಲಕ ಎಲ್ಲರೂ ಆರೋಗ್ಯದ ಕಾಳಜಿ ವಹಿಸಬೇಕು ಎಂದರು.

ತಾಲೂಕು ಆಯುಷ್ ವೈದ್ಯಾಧಿಕಾರಿ ವಿ.ಆರ್.ತಾಳಿಕೋಟಿ, ವನಸ್ಪತಿ ಔಷಧಗಳ ಮಹತ್ವ ಕುರಿತು ಮಾಹಿತಿ ನೀಡಿದರು. ಆಯುಷ ವೈದ್ಯರಾದ ಜ್ಯೋತಿ ಕಟ್ಟಿ ಮಾತನಾಡಿದರು. ಗ್ರೇಡ್ 2 ತಹಸೀಲ್ದಾರ್ ವಿ.ಎಚ್.ಹೊರಪೇಟಿ ಕಾರ್ಯಕ್ರಮ ಉದ್ಘಾಟಿಸಿದರು.

ಉಪತಹಸೀಲ್ದಾರ್ ವಿಜಯಕುಮಾರ ಗುಂಡೂರು, ಶಿರಸ್ತೇದಾರರಾದ ಮಲ್ಲಿಕಾರ್ಜುನ ಶಾಸ್ತ್ರಿಮಠ, ರೇಣುಕಾ ಗುಂಜಾಳ, ಶರಣಬಸಪ್ಪ, ವೈದ್ಯೆ ಪುಷ್ಪಾ ಭಾಗಿ, ರೇಷ್ಮೆ ಇಲಾಖೆ ಅಧಿಕಾರಿ ಡಿ.ಎಚ್.ಪ್ರೇಮಾ, ಸಿಬ್ಬಂದಿ ಗೀತಾ, ಉಮಾ, ಜ್ಯೋತಿ, ಕೊಟ್ರಯ್ಯ ಹಿರೇಮಠ, ಹನುಮಗೌಡ ಪಾಟೀಲ್, ಸಂತೋಷ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net