ಕೂಸಿನ ಮನೆ ಸರಿಯಾಗಿ ನಿರ್ವಹಿಸಿ, ಕ್ರೆಚ್ಛಸ್ ಸಂಸ್ಥೆ ತಂಡದ ಎಂ.ವಿ.ಜಗದೀಶ ಸೂಚನೆ

nursing home
ಯಲಬುರ್ಗಾ ತಾಲೂಕಿನ ಗೆದಗೇರಿ ಗ್ರಾಪಂನ ಕೂಸಿನ ಮನೆಗೆ ಕ್ರೆಚ್ಛಸ್ ಸಂಸ್ಥೆ ರಾಜ್ಯ ತಂಡದ ಎಂ.ವಿ.ಜಗದೀಶ ಭೇಟಿ ನೀಡಿ ಪರಿಶೀಲಿಸಿದರು. ತಾಪಂ ಸಹಾಯಕ ನಿರ್ದೇಶಕ ಎಫ್.ಡಿ.ಕಟ್ಟಿಮನಿ, ಆರ್‌ಜಿಎಫ್‌ಪಿ ಸಂಯೋಜಕ ನವೀನ, ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ, ಪಿಡಿಒ ದೊಡ್ಡಪ್ಪ ನಾಯ್ಕ ಇದ್ದರು.
Published on

ಯಲಬುರ್ಗಾ: ತಾಲೂಕಿನ 22 ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡುವ ಕೂಲಿಕಾರರ ಮಕ್ಕಳಿಗಾಗಿ ತೆರೆದಿರುವ ಕೂಸಿನ ಮನೆಗಳನ್ನು ಬೆಂಗಳೂರಿನ ಕ್ರೆಚ್ಛಸ್ ಸಂಸ್ಥೆ ರಾಜ್ಯ ತಂಡ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಕೂಸಿನ ಮನೆಗಳಲ್ಲಿನ ಮಕ್ಕಳ ಲಾಲನೆ ಪಾಲನೆ, ಹಾಜರಾತಿ, ಕೇರ್‌ಟೇಕರ್ ಹಾಜರಾತಿ, ಪೌಷ್ಟಿಕ ಆಹಾರ, ಉತ್ತಮ ಕಲಿಕಾ ವಾತಾವರಣ ಇತ್ಯಾದಿಗಳ ಕುರಿತು ರಾಜ್ಯ ತಂಡದ ಎಂ.ವಿ.ಜಗದೀಶ ಮಾಹಿತಿ ಪಡೆದರು.

ಬಳಿಕ ಎಂ.ವಿ.ಜಗದೀಶ ಮಾತನಾಡಿ, ತಾಲೂಕಿನಲ್ಲಿರುವ ಕೂಸಿನ ಮನೆಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕಿದೆ. ಕೂಲಿಕಾರರ ಮಕ್ಕಳನ್ನು ಹೆಚ್ಚಾಗಿ ಕರೆತರುವ ಮೂಲಕ ಯೋಜನೆಯ ಲಾಭ ಪಡೆಯಲು ಪಾಲಕರಿಗೆ ತಿಳಿಸಬೇಕು. ಇದಕ್ಕೆ ಗ್ರಾಪಂ ಪಿಡಿಒ ಹಾಗೂ ಕೇರ್‌ಟೇಕರ್ ಉತ್ತಮ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.

ತಾಪಂ ಸಹಾಯಕ ನಿರ್ದೇಶಕ ಎಫ್.ಡಿ.ಕಟ್ಟಿಮನಿ, ಆರ್‌ಜಿಎಫ್‌ಪಿ ಸಂಯೋಜಕ ನವೀನ, ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ, ಪಿಡಿಒಗಳಾದ ದೊಡ್ಡಪ್ಪ ನಾಯ್ಕ, ನಾಗರಾಜ, ವೆಂಕಟೇಶ ನಾಯ್ಕ, ಸರ್ವಮಂಗಳ, ಗ್ರಾಪಂ ಮತ್ತು ಕೂಸಿನ ಮನೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net