ಗೋವು ಸಂರಕ್ಷಣೆಗೆ ಸರ್ಕಾರ ಬದ್ಧ- ಸಚಿವ ಹಾಲಪ್ಪ ಆಚಾರ್ ಹೇಳಿಕೆ

Bevuru Cow School
ಯಲಬುರ್ಗಾ ತಾಲೂಕಿನ ಬೇವೂರಿನಲ್ಲಿ ಗೋಶಾಲೆಯನ್ನು ಸಚಿವ ಹಾಲಪ್ಪ ಆಚಾರ್ ಉದ್ಘಾಟಿಸಿದರು.
Published on

ಯಲಬುರ್ಗಾ: ರಾಜ್ಯದಲ್ಲಿ ಗೋವುಗಳ ಸಂರಕ್ಷಣೆಗೆ ಬಿಜೆಪಿ ಸರ್ಕಾರ ಬದ್ಧವಿದೆ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.

ಬೇವೂರು ಗ್ರಾಮದ ಹೊರವಲಯದಲ್ಲಿ ನಿರ್ಮಿಸಿರುವ ಗೋಶಾಲೆ ಉದ್ಘಾಟನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದರು. ಜಾನುವಾರು ಸಂತತಿ ಹೆಚ್ಚಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಗೋವುಗಳ ಸಂರಕ್ಷಣಾ ಕಾಯ್ದೆ ಜಾರಿಗೆ ತಂದು ಗೋವುಗಳ ಉಳಿವಿಗೆ ಶ್ರಮಿಸಲಾಗುತ್ತಿದೆ. ಕಟುಕರ ಪಾಲಾಗುವ ಗೋವುಗಳ ಉಳಿಸುವ ಕೆಲಸ ಪ್ರತಿಯೊಬ್ಬರೂ ಮಾಡಬೇಕು ಎಂದರು. ಕ್ಷೇತ್ರ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಪ್ರತಿ ಗ್ರಾಮದಲ್ಲಿ ವಿವಿಧ ಕಾಮಗಾರಿ ಗುಣಮಟ್ಟದಿಂದ ಮಾಡಿದ ತೃಪ್ತಿ ನನಗಿದೆ ಎಂದು ತಿಳಿಸಿದರು.

ಪಶು ವೈದ್ಯಾಧಿಕಾರಿಗಳಾದ ಡಿ.ಮೋಹನಕುಮಾರ, ಪ್ರಕಾಶ ಚೂರಿ, ಗ್ರಾಪಂ ಅಧ್ಯಕ್ಷ ಸೋಮಲಿಂಗಪ್ಪ ಕೋಳಜಿ, ತಹಸೀಲ್ದಾರ್ ವಿಠ್ಠಲ ಚೌಗಲಾ, ತಾಪಂ ಇಒ ಸಂತೋಷ ಪಾಟೀಲ್, ಪ್ರಮುಖರಾದ ಶಂಕರಗೌಡ ಟಣಕನಕಲ್, ಶರಣಪ್ಪ ಈಳಿಗೇರ್, ವೀರಣ್ಣ ಹುಬ್ಬಳ್ಳಿ, ವಿಶ್ವನಾಥ ಮರಿಬಸಪ್ಪನವರ, ಶಿವಪ್ಪ ವಾದಿ, ಸಿದ್ದು ಮಣ್ಣಿನವರ, ಅಯ್ಯನಗೌಡ ಕೆಂಚಮ್ಮನವರ್, ಕಳಕಪ್ಪ ಕಂಬಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net