ನಿಗದಿತ ದರಕ್ಕೆ ಮಾರಾಟ ಮಾಡಿ; ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಉಪನಿರ್ದೇಶಕ ನಾರಾಯಣರಡ್ಡಿ ತಾಕೀತು

29032020 Yelburga Merchants Meeting
Published on

ಯಲಬುರ್ಗಾ: ನಿಗದಿತ ದರಕ್ಕೆ ಸಾಮಗ್ರಿಗಳನ್ನು ಮಾರಾಟ ಮಾಡಬೇಕು. ಗ್ರಾಹಕರಿಂದ ಹೆಚ್ಚಿನ ದರ ಪಡೆದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಉಪನಿರ್ದೇಶಕ ಕೆ.ನಾರಾಯಣರಡ್ಡಿ ಹೇಳಿದರು.

ಪಪಂ ಕಚೇರಿಯಲ್ಲಿ ವರ್ತಕರು ಹಾಗೂ ಕಿರಾಣಿ ಅಂಗಡಿ ಮಾಲೀಕರ ಸಭೆಯಲ್ಲಿ ಭಾನುವಾರ ಮಾತನಾಡಿದರು. ಕರೊನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಕೈಗೊಂಡ ಲಾಕ್‌ಡೌನ್ ಆದೇಶವಿದ್ದು, ಕೆಲ ವ್ಯಾಪಾರಿಗಳು ದಿನಸಿಗಳ ಬೆಲೆಯನ್ನು ಹೆಚ್ಚು ಪಡೆಯುವ ಮಾಹಿತಿ ಬಂದಿದೆ. ಸರಿಯಾದ ಬೆಲೆಗೆ ತಲುಪಿಸುವ ಕಾರ್ಯ ಮಾಡಬೇಕು. ದಿನಸಿ ವರ್ತಕರು ಹಾಗೂ ತರಕಾರಿ ಮಾರಾಟಗಾರರು ಗ್ರಾಹಕರಿಂದ ಮೊಬೈಲ್ ಮೂಲಕ ಮಾಹಿತಿ ಪಡೆದು, ಅವರ ಮನೆಗೆ ನೇರವಾಗಿ ಸಾಮಗ್ರಿ ರವಾನಿಸಬೇಕು. ಇದರಿಂದ ಅನುಕೂಲವಾಗುತ್ತದೆ ಎಂದರು.

ವರ್ತಕರ ಸಂಘದ ಅಧ್ಯಕ್ಷ ಶಿಕುಮಾರ ಭೂತೆ ಮಾತನಾಡಿದರು. ತಹಸೀಲ್ದಾರ್ ಶ್ರೀಶೈಲ ತಳವಾರ್, ತಾಲೂಕು ಆರೋಗ್ಯಾಧಿಕಾರಿ ಮಂಜುನಾಥ ಬ್ಯಾಲಹುಣಸಿ, ಪಪಂ ಮುಖ್ಯಾಧಿಕಾರಿ ಮಹೇಶ ನಿಡಶೇಸಿ, ಸಿಬ್ಬಂದಿಯಾದ ರೆಹಮನ್, ರಮೇಶ ಬೆಲೇರಿ, ಯಂಕಣ್ಣ ಜೋಶಿ, ವರ್ತಕರದಾದ ವಿಜಯ ಕುಮಾರ ಕರಂಡಿ, ಪ್ರಸನ್ನ ಶೆಟ್ಟರ್, ಆನಂದ ಕಲಬುರ್ಗಿ, ಗೋಪಿ ಮಾರವಾಡಿ, ವಿಜಯ ಕರಂಡಿ ಇತರರು ಇದ್ದರು.

ನಿರ್ಗತಿಕರಿಗೆ ಊಟ : ಯಲಬುರ್ಗಾ ಪಪಂನಿಂದ ಪಟ್ಟಣದ ಎಲ್ಲ ವಾರ್ಡ್‌ಗಳ ವಯೋವೃದ್ಧರು, ನಿರ್ಗತಿಕರಿಗೆ ಊಟದ ಪೊಟ್ಟಣವನ್ನು ಶನಿವಾರ ವಿತರಿಸಲಾಯಿತು. ಪಪಂ ಮುಖ್ಯಾಧಿಕಾರಿ ಮಹೇಶ ನಿಡಶೇಸಿ, ಸಿಬ್ಬಂದಿ ವೆಂಕಣ್ಣ ಜೋಶಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net