ಪೌರ ಕಾರ್ಮಿಕರ ಸೇವೆ ಮರೆಯುವಂತಿಲ್ಲ

UNTILETED 23
Published on

ಯಲಬುರ್ಗಾ: ಪೌರ ಕಾರ್ಮಿಕರು ನಾಗರಿಕರ ಜೀವ ಹಾಗೂ ಜೀವನದ ರಕ್ಷಕರು ಎಂದು ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ ಬಣ್ಣಿಸಿದರು.

ಪಟ್ಟಣದಲ್ಲಿ ಪಪಂನಿಂದ ಹಮ್ಮಿಕೊಂಡಿದ್ದವ ಪೌರ ಕಾರ್ಮಿಕರಿಗೆ ಸಮವಸ್ತ್ರ ವಿತರಿಸಿ ಗುರುವಾರ ಮಾತನಾಡಿದರು. ಈ ಹಿಂದೆ ಕೋವಿಡ್‌ನಿಂದಾಗಿ ಜನಜೀವನ ತತ್ತರಗೊಂಡಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಪೌರ ಕಾರ್ಮಿಕರು ಜೀವದ ಹಂಗು ತೊರೆದು ನಗರದ ಸ್ವಚ್ಛತೆಗೆ ಹಗಲಿರುಳು ಶ್ರಮಿಸಿದ್ದರು. ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ಕಾರ್ಯವನ್ನು ಯಾರೂ ಮರೆಯುವಂತಿಲ್ಲ ಎಂದರು.

ಪಪಂ ಮುಖ್ಯಾಧಿಕಾರಿ ನಾಗೇಶ ಮಾತನಾಡಿ, ಇಲಾಖೆಯಿಂದ ಪೌರ ಕಾರ್ಮಿಕರಿಗೆ ಮಳೆಯಾಶ್ರಿತ ಜರ್ಕಿನ್, ಶರ್ಟ್, ಪ್ಯಾಂಟ್ ಹಾಗೂ ಇನ್ನಿತರ ವಸ್ತುಗಳನ್ನು ನೀಡಲಾಗುತ್ತಿದೆ. ಪಟ್ಟಣ ಸುಂದರ ಹಾಗೂ ಸ್ವಚ್ಚವಾಗಿ ಕಾಣಲು ಕಾರ್ಮಿಕರ ಶ್ರಮ ಅಡಗಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಶಶೀಧರ ಸಕ್ರಿ ಅವರು ವಸತಿ ನಿಲಯದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳನ್ನು ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net