ಬೆಂಕಿ ಆಕಸ್ಮಿಕದಿಂದ ಎರಡು ಬಣವೆ ಭಸ್ಮ

10042020 Yelburga stack burn
Published on

ಯಲಬುರ್ಗಾ: ತಾಲೂಕಿನ ಚೌಡಾಪುರ ಗ್ರಾಮದ ರೈತ ಬಸಣ್ಣ ವಣಗೇರಿ ಜಮೀನಲ್ಲಿರುವ ಎರಡು ಬಣವೆಗಳು ಬೆಂಕಿ ಆಕಸ್ಮಿಕದಿಂದ ಶುಕ್ರವಾರ ಭಸ್ಮವಾಗಿವೆ.

ಯಡ್ಡೋಣಿ ರಸ್ತೆಯಲ್ಲಿರುವ ಒಂದು ಮೇವಿನ ಬಣವೆ ಹಾಗೂ ಶೇಂಗಾ ಹೊಟ್ಟಿನ ಬಣವೆ ಸುಟ್ಟಿವೆ. ಸ್ಥಳಕ್ಕೆ ಆಗಮಿಸಿದ ಕುಷ್ಟಗಿ ಅಗ್ನಿಶಾಮಕ ದಳ, ಬಣವೆ ಹತ್ತಿರ ಕಟ್ಟಿದ್ದ ಎರಡು ಎತ್ತು ಹಾಗೂ ಸುತ್ತಲಿನ ಬಣವೆಗಳನ್ನು ರಕ್ಷಿಸಿದ್ದಾರೆ. ಠಾಣಾಧಿಕಾರಿ ರಾಜು, ಸಿಬ್ಬಂದಿ ರಾಮಪ್ಪ, ನಂದೀಶ, ಹುಸೇನ್‌ಪಾಷಾ, ಶರಣಪ್ಪ ಮಾಲಿಪಾಟೀಲ್, ಅನೀಲ್ ವಟಾರದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net