ಸಮಯಕ್ಕೆ ಸರಿಯಾಗಿ ಬಸ್ ಬಿಡಿ ; ಸಾರಿಗೆ ಡಿಪೋ ವ್ಯವಸ್ಥಾಪಕಗೆ ಎಸ್‌ಎಫ್‌ಐ ಮನವಿ

22092021 Yelburga Students protest
Published on

ಯಲಬುರ್ಗಾ: ತಾಲೂಕಿನ ಬೂನಕೊಪ್ಪ ಗ್ರಾಮಕ್ಕೆ ಸಮಯಕ್ಕೆ ಸರಿಯಾಗಿ ಬಸ್ ಬಿಡುವಂತೆ ಒತ್ತಾಯಿಸಿ ಪಟ್ಟಣದ ಸಾರಿಗೆ ಘಟಕದ ವ್ಯವಸ್ಥಾಪಕ ರಮೇಶ ಚಿಣಗಿಗೆ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬುಧವಾರ ಮನವಿ ಸಲ್ಲಿಸಿದರು.

ಪಟ್ಟಣದ ಶಾಲಾ-ಕಾಲೇಜುಗಳಿಗೆ ಬೂನಕೊಪ್ಪದಿಂದ ನಿತ್ಯ 40ಕ್ಕೂ ಅಧಿಕ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಕಾಲೇಜು ಮುಗಿದ ಬಳಿಕ ಮರಳಿ ಗ್ರಾಮಕ್ಕೆ ತೆರಳಲು ಸಮರ್ಪಕ ಬಸ್ ಸೌಕರ್ಯ ಇಲ್ಲದೆ ಸಮಸ್ಯೆ ಎದುರಿಸುವಂತಾಗಿದೆ. ಹೀಗಾಗಿ ಹಗೇದಾಳ ಮಾರ್ಗವಾಗಿ ಚಲಿಸುವ ಬಸ್ ಅನ್ನು ಮಧ್ಯಾಹ್ನ ಸಂಚರಿಸುವಂತೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ಸಂಘಟನೆಯ ತಾಲೂಕು ಸಂಚಾಲಕ ಎಂ.ಸಿದ್ದಪ್ಪ, ಪದಾಧಿಕಾರಿಗಳಾದ ಪಂಚಾಕ್ಷರಯ್ಯ ವಸ್ತ್ರದ, ನೀಲಕಂಠ ಪೂಜಾರಿ, ಅಲ್ಲಾಭಕ್ಷಿ, ವಿದ್ಯಾರ್ಥಿಗಳಾದ ರವಿ ಗಡಗಿ, ಸಲೀಂ, ಸುರೇಶ, ಮೌಲಾಹುಸೇನ್ ಕಲ್ಲಪ್ಪ, ಅಕ್ಷತಾ, ಆಸ್ಮಾ, ಲಲಿತಾ, ವಿಜಯಲಕ್ಷ್ಮೀ, ಅಂಜನಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net