ರಕ್ತದಾನ ಅತ್ಯಂತ ಶ್ರೇಷ್ಠ ಕಾರ್ಯ

Untitled design (55)
ಯಲಬುರ್ಗಾ ತಾಲೂಕಿನ ಬಂಡಿಹಾಳ ಕೆರಿಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ 33 ಸಲ ರಕ್ತದಾನ ಮಾಡಿದ ಬಾಬಾಖಲಂದರ್‌ಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಮುಖ್ಯಸ್ಥ ಡಾ.ಶಿವನಗೌಡ ದಾನರಡ್ಡಿ, ನಿರ್ದೇಶಕರಾದ ಶಿವಶರಣಪ್ಪ ಬಳಿಗೇರ, ಡಾ.ಶಿವಕುಮಾರ ದಿವಟರ, ಸಂಚಾಲಕ ದೇವೇಂದ್ರಪ್ಪ ಹಿಟ್ನಾಳ ಇದ್ದರು.
Published on

ಯಲಬುರ್ಗಾ: ರಕ್ತದಾನ ಮಾಡುವುದು ಪುಣ್ಯದ ಕಾರ್ಯವಾಗಿದೆ ಎಂದು ರೆಡ್‌ಕ್ರಾಸ್ ಸಂಸ್ಥೆ ತಾಲೂಕು ಮುಖ್ಯಸ್ಥ ಡಾ.ಶಿವನಗೌಡ ದಾನರಡ್ಡಿ ಹೇಳಿದರು.
ತಾಲೂಕಿನ ಬಂಡಿಹಾಳ ಗ್ರಾಮದ ಕೆರಿಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ದಾನಗಳಲ್ಲೇ ರಕ್ತದಾನ ಅತ್ಯಂತ ಶ್ರೇಷ್ಠವಾಗಿದೆ. ಅದು ಮತ್ತೊಬ್ಬರ ಪ್ರಾಣ ಉಳಿಸುವ ಜತೆಗೆ ವ್ಯಕ್ತಿಯ ಆರೋಗ್ಯಯುತ ಜೀವನ ನಡೆಸಲು ಸಹಕಾರಿಯಾಗಿದೆ. ಆರೋಗ್ಯವಂತರು ಸ್ವಯಂ ಪ್ರೇರಿತ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ರೆಡ್‌ಕ್ರಾಸ್ ಸಂಸ್ಥೆ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಸಂಕಷ್ಟದಲ್ಲಿರುವ ಜನರ ಜೀವ ಉಳಿಸುವಂತ ಕಾರ್ಯಕ್ಕೆ ಮುಂದಾಗುತ್ತಿದೆ ಎಂದರು.
ಯಲಬುರ್ಗಾದ ಯುವಕ ಬಾಬಾ ಖಲಂದರ್ ಅವರ ಜನ್ಮದಿನದ ನಿಮಿತ್ತವಾಗಿ ರಕ್ತದಾನ ಮಾಡಿದರು. ಇವರು ಸತತ 33 ಬಾರಿ ಸ್ವಯಂ ಪ್ರೇರಿತ ರಕ್ತದಾನ ಮಾಡಿ ಮಾದರಿಯಾಗಿದ್ದಾರೆ. ಇವರಿಗೆ ಸಂಸ್ಥೆಯಿಂದ ಸನ್ಮಾನಿಸಲಾಯಿತು. ರಕ್ತದಾನ ಮಾಡಿದವರಿಗೆ ಸಂಸ್ಥೆಯಿಂದ ಪ್ರಮಾಣಪತ್ರ ನೀಡಲಾಯಿತು.

ಸಂಸ್ಥೆಯ ನಿರ್ದೇಶಕರಾದ ಶಿವಶರಣಪ್ಪ ಬಳಿಗೇರ, ಡಾ.ಶಿವಕುಮಾರ ದಿವಟರ, ಸಂಚಾಲಕ ದೇವೇಂದ್ರಪ್ಪ ಹಿಟ್ನಾಳ, ಪ್ರಮುಖರಾದ ಬಸವರಾಜ ಪಟ್ಟೇದ, ಮಲ್ಲಪ್ಪ ನಿಂಗನಗೌಡ, ಗುರಪ್ಪ, ಮಂಜುನಾಥ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net