ಜೀವನದಲ್ಲಿ ಮಹಾಜ್ಞಾನಿಗಳ ಆದರ್ಶ ಪಾಲನೆ ಅಗತ್ಯ

bhageeratha-mahrshi
ಯಲಬುರ್ಗಾದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಭಗೀರಥ ಮಹರ್ಷಿ ಜಯಂತಿ ಆಚರಿಸಲಾಯಿತು. ಮಾಜಿ ಸಚಿವ ಬಸವರಾಜ ರಾಯರಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಪ್ರಮುಖರಾದ ಬಸವರಾಜ ಪೂಜಾರ, ಶರಣಪ್ಪ ಉಪ್ಪಾರ, ವೀರನಗೌಡ ಪಾಟೀಲ್ ಬಳೂಟಗಿ ಇದ್ದರು.
Published on

ಯಲಬುರ್ಗಾ: ತಪೋಶಕ್ತಿಯಿಂದ ಗಂಗೆಯನ್ನು ಧರೆಗೆ ತಂದ ಭಗೀರಥ ಮಹರ್ಷಿ ಆದರ್ಶವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.
ನಾಡಿಗೆ ಭಗೀರಥರ ಸೇವೆ ಅತ್ಯಂತ ಅಮೋಘ ಮತ್ತು ಸ್ಮರಣೀಯವಾಗಿದೆ.

ಸಮಾಜದ ಉದ್ಧಾರಕ್ಕಾಗಿ ಶ್ರಮಿಸಿದ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ಪ್ರತಿಯೊಬ್ಬರೂ ಮುನ್ನಡೆಯಬೇಕು. ಮಹಾಜ್ಞಾನಿಗಳ ತತ್ವಾದರ್ಶ ಅಳವಡಿಸಿಕೊಂಡು ಮೌಲ್ಯಯುತ ಬದುಕು ಕಟ್ಟಿಕೊಳ್ಳಬೇಕು. ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಪ್ರಮುಖರಾದ ಬಸವರಾಜ ಪೂಜಾರ, ಶರಣಪ್ಪ ಉಪ್ಪಾರ, ವೀರನಗೌಡ ಪಾಟೀಲ್ ಬಳೂಟಗಿ, ಪಿ.ಟಿ.ಉಪ್ಪಾರ, ಟಿ.ರತ್ನಾಕರ, ಕರಿಬಸಪ್ಪ ನಿಡಗುಂದಿ, ಶಿವನಗೌಡ ದಾನರಡ್ಡಿ, ಸುದೀರ್ ಕೊರ್ಲಹಳ್ಳಿ, ಹನುಮಂತಪ್ಪ ಭಜಂತ್ರಿ, ರಿಯಾಜ್ ಅಹ್ಮದ್ ಖಾಜಿ, ಶರಣಪ್ಪ ಕೊಪ್ಪಳ, ಪುನೀತ್ ಕೊಪ್ಪಳ, ಶರಣಗೌಡ ಬಸಾಪುರ, ಕಳಕೇಶ ಸೂಡಿ, ರಾಜು ನಿಡಗುಂದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net