

ಯಲಬುರ್ಗಾ: ಸರ್ವಧರ್ಮಿಯರು ಸಹೋದರರಂತೆ ಬಾಳ್ವೆ ಮಾಡುವ ನಾಡು ನಮ್ಮದು. ಹಾಲುಮತ ಸಮಾಜದವರ ಮನಸ್ಸು ಹಾಲಿನಷ್ಟೆ ಪವಿತ್ರ ಎಂದು ಜಿಪಂ ಮಾಜಿ ಸದಸ್ಯ ಸಿ.ಎಚ್.ಪೊಲೀಸ್ ಪಾಟೀಲ್ ಹೇಳಿದರು.
ಪಟ್ಟಣದ ಮುಧೋಳ ರಸ್ತೆಯಲ್ಲಿರುವ ಶ್ರೀ ಬೀರಲಿಂಗೇಶ್ವರ ಜಾತ್ರೋತ್ಸವದ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂದುಗಳ ಪವಿತ್ರ ಹಬ್ಬವಾದ ಶಿವರಾತ್ರಿಯ ದಿನ ನಡೆಯುವ ಜಾತ್ರೆ ವಿಶೇಷವಾಗಿದೆ ಎಂದರು.
ಮಾಜಿ ಜಿಪಂ ಸದಸ್ಯ ಅರವಿಂದಗೌಡ ಪಾಟೀಲ ಮಾತನಾಡಿ, ಜಾತ್ರೋತ್ಸವದಲ್ಲಿ ಹಾಲುಮತ ಸಮಾಜದಿಂದ ಟಗರಿನ ಕಾಳಗ, ನಾಟಕ, ಕುಂಭ ಮೆರವಣಿಗೆ ಹಾಗೂ ಡೊಳ್ಳು ಕುಣಿತ ಆಯೋಜಿಸಲಾಗುತ್ತದೆ. ಇದರ ಜತೆ ಉಚಿತ ಸಾಮೂಹಿಕ ವಿವಾಹ ನಡೆಸುವುದರಿಂದ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು. ಎರಡು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು.
ಶ್ರೀ ದ್ಯಾಮಯ್ಯ ಗುರುವಿನ, ಕುಕನೂರಿನ ಅಮೋಘ ಸಿದ್ಧೇಶ್ವರ ಮಠದ ವಿರುಪಾಕ್ಷಯ್ಯ ಗುರುವಿನ, ಬೂನಕೊಪ್ಪ ಧರ್ಮರಮಠದ ನಾಗಲಿಂಗಪಜ್ಜನವರು, ಹಾಲುಮತ ಸಮಾಜದ ತಾಲೂಕಾಧ್ಯಕ್ಷ ವೀರನಗೌಡ, ಸಿಡಿಪಿಒ ಬೇಟದೇಶ ಮಾಳೆಕೊಪ್ಪ, ಪ್ರಮುಖರಾದ ಅಮರಪ್ಪ ಕಲಬುರ್ಗಿ, ಕೆರಿಬಸಪ್ಪ ನಿಡಗುಂದಿ, ಶೇಖರಗೌಡ ಉಳ್ಳಾಗಡ್ಡಿ, ಸಂಗಣ್ಣ ಟೆಂಗಿನಕಾಯಿ, ಅಮರೇಶ ಹುಬ್ವಳ್ಳಿ, ಆನಂದ ಉಳ್ಳಾಗಡ್ಡಿ, ರೆವಣೆಪ್ಪ ಹಿರೇಕುರುಬರ, ಶಿವು ರಾಜೂರ, ಶಾರದಾ ಸಾಲಬಾವಿ, ಪ್ರೇಮಾ ಮುದಗಲ್, ಬಾಲಚಂದ್ರ ಸಾಲಬಾವಿ, ರುದ್ರೇಶ ಹಿರೇಕುರುಬರ, ಬಸವರಾಜ ಕೊಂಡಗುರಿ, ಈಶಪ್ಪ ಮಳಗಿ, ಈರಣ್ಣ ಬಂಡಿಹಾಳ ಇತರರಿದ್ದರು.