ಲೋಕ ಕಂಡ ವಿಸ್ಮಯ ಬಸವಣ್ಣ

release of invitation letter
ಶರಣ ಮೇಳ ಪ್ರಚಾರಾರ್ಥ ಯಲಬುರ್ಗಾ ತಾಲೂಕಿನ ಗುಳೆ ಗ್ರಾಮದಲ್ಲಿ ಅನಿಮಿಶಾನಂದ ಸ್ವಾಮೀಜಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಬಸವರತ್ನ ಮಾತಾಜಿ, ಪ್ರಮುಖರಾದ ದೇವಪ್ಪ ಕೋಳೂರು, ಬಸವರಾಜ ಹೂಗಾರ ಇದ್ದರು.
Published on

ಯಲಬುರ್ಗಾ: ಲೋಕ ಕಂಡ ವಿಸ್ಮಯ, ಕಾಯಕ, ದೀನ ದಲಿತರ ಜೀವನದ ಉಸಿರಾಗಿ ಬಂಡಾಯದ ಬಾವುಟ ಎತ್ತಿದ ಬಸವಣ್ಣ ಆದರ್ಶ ಎಲ್ಲರಿಗೂ ಸ್ಫೂರ್ತಿ ಎಂದು ಜಿಯಾಗೂಡಿನ ಬಸವಮಂಟಪದ ಸದ್ಗುರು ಅನಿಮಿಶಾನಂದ ಸ್ವಾಮೀಜಿ ಹೇಳಿದರು.

ಕೂಡಲಸಂಗಮದಲ್ಲಿ ಜನವರಿಯಲ್ಲಿ ಆಯೋಜಿಸಿರುವ 38ನೇ ಶರಣ ಮೇಳ ಪ್ರಚಾರಾರ್ಥ ತಾಲೂಕಿನ ಗುಳೆ ಗ್ರಾಮದಲ್ಲಿ ರಾಷ್ಟ್ರೀಯ ಬಸವದಳ ಸಮ್ಮುಖದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಬುಧವಾರ ಮಾತನಾಡಿದರು.

ಜ.12 ರಿಂದ 14ರ ವರೆಗೆ ಕೂಡಲಸಂಗಮದಲ್ಲಿ ಐತಿಹಾಸಿಕ, ಚಾರಿತ್ರಿಕವಾಗಿ 12ನೇ ಶತಮಾನದ ಶರಣರ ಸತ್ಸಂಕಲ್ಪದಂತೆ 38ನೇ ಶರಣಮೇಳ ಜರುಗಲಿದೆ ಎಂದರು. ಬಸವದಳದ ಕಾರ್ಯದರ್ಶಿ ಬಸವರಾಜ ಹೂಗಾರ ಮಾತನಾಡಿದರು.

ಬಸವರತ್ನ ಮಾತಾಜಿ, ಪ್ರಮುಖರಾದ ದೇವಪ್ಪ ಕೋಳೂರು, ವಿರೂಪಾಕ್ಷಪ್ಪ ಮೇಟಿ, ಶಿವಣ್ಣ ಕರುವಿನ, ನಾಗನಗೌಡ ಜಾಲಿಹಾಳ, ರೇಣುಕಪ್ಪ ಮಂತ್ರಿ, ಶರಣಪ್ಪ ಹೊಸಳ್ಳಿ, ಲಿಂಗನಗೌಡ ದಳಪತಿ, ಬಸಣ್ಣ ಹೊಸಳ್ಳಿ, ಬಸವರಾಜ ಕೋಳೂರು, ಬಸವರಾಜ ಹೊಸಳ್ಳಿ, ನಿಜಲಿಂಗಪ್ಪ ಮಂತ್ರಿ, ದೇವೇಂದ್ರಪ್ಪ ಆವಾರಿ, ಹನುಮೇಶ ಹೊಸಳ್ಳಿ, ಗಿರಿಮಲ್ಲಪ್ಪ ಪರಂಗಿ, ಪರಮೇಶ್ವರ ಉಚ್ಚಲಕುಂಟಿ, ಯಮನಮ್ಮ ಗೌಡ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net