ಆಸ್ತಿ-ಅಂತಸ್ತಿಗಿಂತ ಆರೋಗ್ಯ ಮುಖ್ಯ

30112022 yelburga helth camp
Published on

ಯಲಬುರ್ಗಾ: ಮನುಷ್ಯನಿಗೆ ಆಸ್ತಿ-ಅಂತಸ್ತಿಗಿಂತ ಆರೋಗ್ಯ ಮುಖ್ಯ ಎನ್ನುವುದನ್ನು ಎಲ್ಲರೂ ಅರಿಯಬೇಕು ಎಂದು ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಎಸ್.ಎ.ನಿಂಗೋಜಿ ಬಿ.ಇಡಿ ಕಾಲೇಜಿನಲ್ಲಿ ಸಚಿವ ಹಾಲಪ್ಪ ಆಚಾರ್ ಜನ್ಮದಿನ ಅಂಗವಾಗಿ ಅವರ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರ ಹಾಗೂ ರಕ್ತದಾನದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಪ್ರತಿಯೊಬ್ಬರೂ ಹಿತಮಿತ ಆಹಾರ ಸೇವಿಸಿ ದೇಹದ ಆರೋಗ್ಯ ಸಮತೋಲನ ಕಾಪಾಡಿಕೊಳ್ಳಬೇಕು. ಸಚಿವ ಹಾಲಪ್ಪ ಆಚಾರ್ ಜನ್ಮದಿನ ನಿಮಿತ್ತ ಅವರ ಅಭಿಮಾನಿ ಬಳಗ ಬಡವರಿಗೆ ಉಚಿತ ಆರೋಗ್ಯ ಶಿಬಿರ ಆಯೋಜಿಸುವ ಮೂಲಕ ಉತ್ತಮ ಕೆಲಸ ಮಾಡುತ್ತಿದೆ ಎಂದರು. ಕಸಾಪ ಮಾಜಿ ಜಿಲ್ಲಾಧ್ಯಕ್ಷ ವೀರಣ್ಣ ನಿಂಗೋಜಿ ಮಾತನಾಡಿದರು. ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಅಭಿಮಾನಿ ಬಳಗದ ಅಧ್ಯಕ್ಷ ಸಿದ್ದು ಉಳ್ಳಾಗಡ್ಡಿ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಗೌರಾ, ಮುಖಂಡರಾದ ಸಿದ್ರಾಮೇಶ ಬೆಲೇರಿ, ಪ್ರಭುರಾಜ ಕಲಬುರ್ಗಿ, ಶಿವಪ್ಪ ವಾದಿ, ಅನಿಲ್ ಆಚಾರ್, ರಂಗನಾಥ ವಲ್ಮಕೊಂಡಿ ಸಚಿನ್ ಆಚಾರ್, ಡಾ.ಚಿನ್ನು ಪಾಟೀಲ್, ಮಲ್ಲಿಕಾರ್ಜುನ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net