ಬಸವಾದಿ ಶರಣರ ಆದರ್ಶ ಅನುಕರಣೀಯ

SANMANA
ಗುಳೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಹುಣ್ಣಿಮೆ ಬಸವಾನುಭವದಲ್ಲಿ ಪ್ರಸಾದ ಸೇವೆಗೈದ ಹನುಮಮ್ಮ ನಿಂಗಪ್ಪ ಗಾಳಿ ದಂಪತಿಯನ್ನು ಸನ್ಮಾನಿಸಲಾಯಿತು. ರಾಯಚೂರು ಬಸವಕೇಂದ್ರದ ಜಿಲ್ಲಾಧ್ಯಕ್ಷ ವೀರಭದ್ರಪ್ಪ ಕುರಕುಂದಿ, ರಾಷ್ಟ್ರೀಯ ಬಸವದಳದ ಅಧ್ಯಕ್ಷ ರೇಣುಕಪ್ಪ ಮಂತ್ರಿ, ಪ್ರಮುಖರಾದ ಶರಣಪ್ಪ ಹೊಸಳ್ಳಿ, ದೇವಪ್ಪ ಕೋಳೂರು, ನಾಗನಗೌಡ ಜಾಲಿಹಾಳ, ಸಣ್ಣ ಅಮರಪ್ಪ ಅಳ್ಳಳ್ಳಿ, ಹನಮಗೌಡ ಬಳ್ಳಾರಿ, ಬಸವರಾಜ ಹೂಗಾರ ಇದ್ದರು.
Published on

ಯಲಬುರ್ಗಾ: ಹನ್ನೆರಡನೇ ಶತಮಾನದ ಬಸವಾದಿ ಶರಣರ ವಿಚಾರಗಳನ್ನು ಜನಮನಗಳಿಗೆ ಬಿತ್ತರಿಸುವ ಸಲುವಾಗಿ ತಿಂಗಳಿಗೊಂದು ಬಸವಾನುಭವ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ರಾಯಚೂರು ಬಸವಕೇಂದ್ರದ ಜಿಲ್ಲಾಧ್ಯಕ್ಷ ವೀರಭದ್ರಪ್ಪ ಕುರಕುಂದಿ ಹೇಳಿದರು.

ತಾಲೂಕಿನ ಗುಳೆ ಗ್ರಾಮದಲ್ಲಿ ರಾಷ್ಟ್ರೀಯ ಬಸವದಳ ಮತ್ತು ಅಕ್ಕನಾಗಲಾಂಬಿಕೆ ಮಹಿಳಾ ಗಣ ಮಂಗಳವಾರ ಹಮ್ಮಿಕೊಂಡಿದ್ದ 91ನೇ ಮಾಸಿಕ ಹುಣ್ಣಿಮೆ ಬಸವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿವಾನುಭವ ಗೋಷ್ಠಿ ನಡೆಸುವುದರಿಂದ ಮಹಾತ್ಮರ ಚಿಂತನೆ, ವಚನಗಳ ಸಾರ ತಿಳಿಯುತ್ತದೆ. ಸಮಾಜದ ಒಳಿತಿಗೆ ಶ್ರಮಿಸಿದ ಬಸವಾದಿ ಶರಣರ ಆದರ್ಶ ಅನುಕರಣೀಯ ಎಂದರು.

ರಾಷ್ಟ್ರೀಯ ಬಸವದಳದ ಕಾರ್ಯದರ್ಶಿ ಬಸವರಾಜ ಹೂಗಾರ, ಜೀವನದ ಸತ್ಯ, ಆಧ್ಯಾತ್ಮಿಕ ವಿಧಾನ ತಿಳಿಸಿಕೊಡುವ ಧರ್ಮ ಯಾರೊಬ್ಬರ ಆಸ್ತಿಯಲ್ಲ ಎಂದರು.

ಪ್ರಮುಖರಾದ ಮಲ್ಲಣ್ಣ, ಅಮರೇಶಪ್ಪ ಗಡಿಹಳ್ಳಿ, ಅಮರೇಶಪ್ಪ ಬಳ್ಳಾರಿ ಮಾತನಾಡಿದರು. ಪ್ರಮುಖರಾದ ದೇವಪ್ಪ ಕೋಳೂರು, ಗಿರಿಗೌಡ ಕೋರಿ, ಚಿದಾನಂದಪ್ಪ ಗೊಂದಿ, ನಿಂಗಪ್ಪ ಪರಂಗಿ, ಲಿಂಗನಗೌಡ ದಳಪತಿ, ರಾಷ್ಟ್ರಪತಿ, ಬಸವರಾಜ ಕೋಳೂರು, ಶರಣಪ್ಪ ಬಸವರಾಜ, ಹನುಮೇಶ, ಶಾಂತಕುಮಾರ ಹೊಸಳ್ಳಿ, ಫಕೀರಪ್ಪ, ಮಲ್ಲಿಕಾರ್ಜುನ ಮಂತ್ರಿ, ನಿಂಗಪ್ಪ ಮಂತ್ರಿ, ನಿಜಲಿಂಗಪ್ಪ, ಶರಣಪ್ಪ ಮಂತ್ರಿ, ಯಮನಮ್ಮ ಗೌಡ್ರ, ಹುಲಿಗೆಮ್ಮ ಅತ್ತಿಗುಡ್ಡದ, ನಾಗಮ್ಮ ಜಾಲಿಹಾಳ, ಶಂಕ್ರಮ್ಮ, ಮಂಜಮ್ಮ, ಶರಣಮ್ಮ ಹೊಸಳ್ಳಿ, ಚನ್ನಮ್ಮ, ಮಲ್ಲಮ್ಮ ಮಂತ್ರಿ, ಹನುಮಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net