

ಯಲಬುರ್ಗಾ: ದೈಹಿಕ ಮತ್ತು ಮಾನಸಿಕ ಒತ್ತಡ ನಿವಾರಣೆಗೆ ಕ್ರೀಡೆ ಅವಶ್ಯ ಎಂದು ವಕೀಲರ ಸಂಘದ ಮಾಜಿ ಅಧ್ಯಕ್ಷ ಆನಂದ ಉಳ್ಳಾಗಡ್ಡಿ ಹೇಳಿದರು.
ಪಟ್ಟಣದಲ್ಲಿ ಪವರ್ ಪ್ಯಾಂಥರ್ಸ್ ವಾಲಿಬಾಲ್ ಕ್ಲಬ್ ಆಯೋಜಿಸಿದ್ದ ಹೊನಲು ಬೆಳಕಿನ ವಾಲಿಬಾಲ್ ಪ್ರೀಮಿಯರ್ ಲೀಗ್ (ಸೀಸನ್-2) ಪಂದ್ಯಾವಳಿಗೆ ಚಾಲನೆ ನೀಡಿ ಭಾನುವಾರ ಮಾತನಾಡಿದರು. ಕ್ರೀಡೆ ಮತ್ತು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದಾಗ ಹೊಸ ಪ್ರತಿಭೆಗಳು ಉದಯಿಸಲು ಸಾಧ್ಯ. ಸೋಲು ಗೆಲುವಿಗಿಂತ ಕ್ರೀಡಾಸ್ಫೂರ್ತಿ ಮೆರೆಯುವುದು ಮುಖ್ಯ ಎಂದರು.
ಕುರುಗೋಡು ತಹಸೀಲ್ದಾರ್ ಗುರುರಾಜ ಛಲವಾದಿ ಮಾತನಾಡಿ, ದೈನಂದಿನ ಜೀವನದಲ್ಲಿ ಕ್ರೀಡೆಗಳಿಗೆ ಪ್ರಾಮುಖ್ಯತೆ ಕೊಡಬೇಕು. ಪಟ್ಟಣದಲ್ಲಿ ವಿವಿಧ ಕ್ರೀಡೆಗಳು ನಿರಂತವಾಗಿ ನಡೆಯುತ್ತಿರುವುದು ಆರೋಗ್ಯಕರ ಬೆಳವಣಿಗೆ. ಕ್ರೀಡೆಯೊಂದಿಗೆ ಶಿಕ್ಷಣ ಕಲಿತು ಬದುಕು ಕಟ್ಟಿಕೊಳ್ಳಬೇಕು. ಆಗ ಜೀವನ ಯಶಸ್ಸಿನ ಹಾದಿಯಲ್ಲಿ ಸಾಗಲು ಸಾಧ್ಯ ಎಂದರು.
ವಕೀಲರ ಸಂಘದ ಉಪಾಧ್ಯಕ್ಷ ಎಚ್.ಎಚ್.ಹಿರೇಮನಿ, ಅರಣ್ಯಾಧಿಕಾರಿ ಷರೀಫ್ ಕೊತ್ವಾಲ್, ರೇಷ್ಮೆ ಅಧಿಕಾರಿ ಗುರುರಾಜ ರಾಮಶೆಟ್ಟಿ, ಆಯೋಜಕ ಯಲ್ಲಪ್ಪ ಹಂದ್ರಾಳ, ಪ್ರಮುಖರಾದ ಕಲ್ಲಪ್ಪ ಕರಮುಡಿ, ಶಾಮೀದ್‌ಸಾಬ್ ಮುಲ್ಲಾ, ಛತ್ರಪ್ಪ ಛಲವಾದಿ, ಚನ್ನಪ್ಪ ಕರಂಡಿ, ಸಾದಿಕ್ ಪಾಷಾ ಖಾಜಿ, ಯಲ್ಲಪ್ಪ ನಾಯಕ, ನಿಂಗಪ್ಪ ಕಮತರ, ರಾಜು ಕುಲಕರ್ಣಿ, ಖಾಜಾಸಾಬ್ ಅಮರಾವತಿ, ಸಿ.ಮಹಾಂತೇಶ, ಶಿವಾನಂದ ಬಣಕಾರ, ಖಾದರ್ ಬಾಷಾ, ಪ್ರಕಾಶ ಛಲವಾದಿ, ಬಸವರಾಜ ಕಮ್ಮಾರ, ಮಹಾಂತೇಶ ತೆಂಗಿನಕಾಯಿ, ಆದರ್ಶ ಇತರರಿದ್ದರು.
20 ವೈಎಲ್‌ಬಿ 01