ಆರೋಗ್ಯ ಕೇಂದ್ರಕ್ಕೆ ವೈದ್ಯರ ನೇಮಿಸಿ

yelburga doctor appointment
ಯಲಬುರ್ಗಾ ತಾಲೂಕಿನ ಬಳೂಟಗಿ ಪಿಎಚ್‌ಸಿಗೆ ಪೂರ್ಣಾವಧಿ ವೈದ್ಯರ ನೇಮಕಕ್ಕೆ ಒತ್ತಾಯಿಸಿ ಡಿಎಚ್‌ಒ ಟಿ.ಲಿಂಗರಾಜುಗೆ ಇಂಜಿನಿಯರ್ ಹಾಗೂ ಸಾಮಾಜಿಕ ಕಾರ್ಯಕರ್ತ ಮಹೇಶಕುಮಾರ ಛಲವಾದಿ ಮನವಿ ಸಲ್ಲಿಸಿದರು. ಆಡಳಿತಾಧಿಕಾರಿ ನಾಗರಾಜ ಜುಮ್ಮಣ್ಣವರ್ ಇದ್ದರು.
Published on

ಯಲಬುರ್ಗಾ: ತಾಲೂಕಿನ ಬಳೂಟಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪೂರ್ಣಾವಧಿ ವೈದ್ಯರನ್ನು ನೇಮಿಸುವಂತೆ ಒತ್ತಾಯಿಸಿ ಡಿಎಚ್‌ಒ ಟಿ.ಲಿಂಗರಾಜುಗೆ ಇಂಜಿನಿಯರ್ ಹಾಗೂ ಸಾಮಾಜಿಕ ಕಾರ್ಯಕರ್ತ ಮಹೇಶಕುಮಾರ ಛಲವಾದಿ ಶುಕ್ರವಾರ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ಅವರು, ಬಳೂಟಗಿ ಗ್ರಾಪಂಗೆ 5 ಗ್ರಾಮಗಳು ಒಳಪಡುತ್ತವೆ. ಅಂದಾಜು 7 ಸಾವಿರ ಜನಸಂಖ್ಯೆ ಇದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪೂರ್ಣಾವಧಿ ವೈದ್ಯರು ಇಲ್ಲದೆ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿದೆ. ಪರಿಣಾಮ ತಾಲೂಕು ಆಸ್ಪತ್ರೆ, ಪಕ್ಕದ ಗಜೇಂದ್ರಗಡ, ಗದಗ ಜಿಲ್ಲೆಯ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪೂರ್ಣಾವಧಿ ವೈದ್ಯರನ್ನು ನೇಮಿಸಿ ಜನರಿಗೆ ಸಕಾಲಕ್ಕೆ ಆರೋಗ್ಯ ಸೇವೆ ದೊರಕುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net