ಬಳೂಟಗಿ ಗ್ರಾಮ ಪಂಚಾಯಿತಿಗೆ ನಗೀನಾಬೇಗಂ ಅಧ್ಯಕ್ಷೆ

220922 Balutagi Chaiperson Selection
ಯಲಬುರ್ಗಾ ತಾಲೂಕಿನ ಬಳೂಟಗಿ ಗ್ರಾಪಂ ಅಧ್ಯಕ್ಷೆಯಾಗಿ ಆಯ್ಕೆಯಾದ ನಗೀನಾಬೇಗಂ ಮೌಲಾಸಾಬ್ ನೂರ್‌ಬಾಷಾರನ್ನು ಸನ್ಮಾನಿಸಲಾಯಿತು.
Published on

ಯಲಬುರ್ಗಾ: ಬಳೂಟಗಿ ಗ್ರಾಪಂ ನೂತನ ಅಧ್ಯಕ್ಷರಾಗಿ ನಗೀನಾಬೇಗಂ ಮೌಲಾಸಾಬ್ ನೂರ್‌ಬಾಷಾ ಗುರುವಾರ ಅವಿರೋಧ ಆಯ್ಕೆಯಾದರು. ಅವಿಶ್ವಾಸದಿಂದ ತೆರೆವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ನಗೀನಾಬೇಗಂ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಶ್ರೀಶೈಲ ತಳವಾರ ಘೋಷಿಸಿದರು.

ಎಲ್ಲ 18 ಸದಸ್ಯರು ಹಾಜರಿದ್ದರು. ಪಿಡಿಒ ರಾಮಣ್ಣ ಹೊಸಮನಿ, ಸಮೀರ್ ಕುಮಾರ್ ಚುನಾವಣೆ ಕಾರ್ಯ ನಿರ್ವಹಿಸಿದರು. ಸರ್ವಸದಸ್ಯರು, ಮುಖಂಡರು ಅಧ್ಯಕ್ಷೆ ನಗೀನಾಬೇಂಗೆ ಹೂಮಾಲೆ ಹಾಕಿ ಸನ್ಮಾನಿಸಿದರು. ಉಪಾಧ್ಯಕ್ಷೆ ಲಲಿತಾ ವೆಂಕಟೇಶ ಪೂಜಾರ, ಪ್ರಮುಖರಾದ ಅಂದಾನಗೌಡ ಪೊಲೀಸ್ ಪಾಟೀಲ್, ಪರ್ತಗೌಡ ಮಾಲಿಪಾಟೀಲ್, ರಾಜಶೇಖರ ಶ್ಯಾಗೋಟಿ, ಶಿವಪ್ಪ ತೊಗರಿ, ಅಲ್ಲಾಸಾಬ್ ಕಟ್ಟಿಮನಿ, ಶಿವಣ್ಣ ರಾಜೂರು, ಶಿವಯ್ಯ ಹಿರೇಮಠ, ಕಳಕಯ್ಯ ಬಳಗೇರಿಮಠ, ಕಳಕನಗೌಡ ನಾಗನಗೌಡ್ರು, ಯಮನೂರಪ್ಪ, ಮಹಾಂತೇಶ ರಾಠೋಡ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net