ರೆಡ್ ನೇಪಿಯರ್ ಅಧಿಕ ಸಾಂದ್ರತೆಯುಳ್ಳ ಮೇವು

Red Napier
ಯಲಬುರ್ಗಾ ತಾಲೂಕಿನ ಹುಣಸಿಹಾಳದಲ್ಲಿ ಆಸ್ಟ್ರೇಲಿಯನ್ ಮೂಲದ ರೆಡ್ ನೇಪಿಯರ್ ಮೇವಿನ ಬೆಳೆ ಕ್ಷೇತ್ರೋತ್ಸವ ನಡೆಯಿತು. ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಂದಾಳು ಡಾ.ಎಂ.ವಿ. ರವಿ, ಪ್ರಗತಿಪರ ರೈತ ಅರುಣಕುಮಾರ, ಕೃಷಿ ಇಲಾಖೆ ನೌಕರರಾದ ಯಮನೂರಪ್ಪ, ಪ್ರಕಾಶ ಬಣಕಾರ ಇದ್ದರು.
Published on

ಯಲಬುರ್ಗಾ: ತಾಲೂಕಿನ ಹುಣಸಿಹಾಳ ಗ್ರಾಮದಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ಆಸ್ಟ್ರೇಲಿಯನ್ ಮೂಲದ ರೆಡ್ ನೇಪಿಯರ್ ಹೆಸರಿನ ಮೇವಿನ ಬೆಳೆ ಕ್ಷೇತ್ರೋತ್ಸವ ಇತ್ತೀಚೆಗೆ ನಡೆಯಿತು.

ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಂದಾಳು ಡಾ.ಎಂ.ವಿ. ರವಿ ಮಾತನಾಡಿ, ರೆಡ್ ನೇಪಿಯರ್ ಆಸ್ಟ್ರೇಲಿಯಾ ಮೂಲದ ಮೇವು ಬೆಳೆಯಾಗಿದ್ದು, ಮೊದಲ ಬಾರಿಗೆ ಜಿಲ್ಲೆಯಲ್ಲಿ ಪ್ರಾತ್ಯಕ್ಷಿಕೆ ಮೂಲಕ ಪರಿಚಯಿಸಲಾಗುತ್ತಿದೆ. ಹೆಚ್ಚಿನ ತೂಕ ಹಾಗೂ ಸಾಂದ್ರತೆ ಹೊಂದಿರುವ ಉತ್ತಮ ಮೇವಿನ ಬೆಳೆಯಾಗಿದೆ.

ನಾಟಿ ಮಾಡಿದ ನಾಲ್ಕೇ ತಿಂಗಳಿನಿಂದಲೇ ಕೊಯ್ಲಿಗೆ ಬರುವ ಈ ಬೆಳೆ, ಪ್ರತಿ ಎಕರೆಗೆ 40ರಿಂದ 50 ಟನ್ ಇಳುವರಿ ಬರುತ್ತದೆ. ಎಕರೆಗೆ ಒಂದು ವರ್ಷಕ್ಕೆ 200 ಟನ್ ಹಸಿ ಮೇವು ನೀಡುತ್ತದೆ. ರೈತರು ಕಡಿಮೆ ಖರ್ಚಿನಲ್ಲಿ ಈ ಬೆಳೆ ನಿರ್ವಹಣೆಯಿಂದ ಹೆಚ್ಚಿನ ಲಾಭ ಪಡೆಯಬಹುದು ಎಂದು ರೆಡ್ ನೇಪಿಯರ್ ಬಗ್ಗೆ ಮಾಹಿತಿ ನೀಡಿದರು.

ಪ್ರಗತಿಪರ ರೈತ ಅರುಣಕುಮಾರ ಮಾತನಾಡಿದರು. ಆತ್ಮ ಯೋಜನೆಯ ಕೃಷಿ ಇಲಾಖೆಯ ಯಮನೂರಪ್ಪ, ಪ್ರಕಾಶ ಬಣಕಾರ, ಕ್ಷೇತ್ರ ಸಹಾಯಕರು, ಪ್ರಗತಿಪರ ರೈತರು ಕ್ಷೇತ್ರೋತ್ಸವದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net