ನಾಡು ಕಟ್ಟಲು ಗಾಂಧೀಗೂ ನಾಟಕಗಳೇ ಪ್ರೇರಣೆ

DRAMA
ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿಯಲ್ಲಿ ಶ್ರೀಕೃಷ್ಣ ಸಂಧಾನ ನಾಟಕ ಪ್ರದರ್ಶನಗೊಂಡಿತು.
Published on

ಯಲಬುರ್ಗಾ: ಕಲೆ, ರಂಗಭೂಮಿ ಮೂಲಕ ಜೀವನೋತ್ಸಾಹ ಪಡೆಯಬಹುದು ಎಂದು ರಂಗಭೂಮಿ ಕಲಾವಿದ ಹಾಗೂ ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ್ ಹೇಳಿದರು.

ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ಕೊಪ್ಪಳದ ಸಹಜ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಎರಡು ದಿನಗಳ ಸಹಜ ನಾಟಕೋತ್ಸವ ಹಾಗೂ 2024ನೇ ಸಾಲಿನ ರಂಗ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾಡು ಕಟ್ಟಲು ಗಾಂಧೀಜಿಗೂ ನಾಟಕಗಳು ಪ್ರಭಾವ ಬೀರಿವೆ. ನವಮಾಧ್ಯಮಗಳ ಹಾವಳಿಯಿಂದ ನಾಟಕ, ಜಾನಪದ ಕಲೆ ನಶಿಸುತ್ತಿವೆ. ಜನ ನಾಟಕಗಳನ್ನು ನೋಡುವ ಆಸಕ್ತಿ ಕಳೆದುಕೊಂಡಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಕೊಪ್ಪಳ ಸಹಜ ಟ್ರಸ್ಟ್‌ನ ಕಾರ್ಯದರ್ಶಿ ಶೀಲಾ ಹಾಲ್ಕುರಿಕೆ ಮಾತನಾಡಿ, ರಂಗಭೂಮಿಯ ಅರಿವು ಮೂಡಿಸುವ ಜತೆಗೆ ಗ್ರಾಮೀಣ ಭಾಗದಲ್ಲಿ ಪ್ರಚಾರ ಪಡಿಸಿಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಟ್ರಸ್ಟ್‌ನಿಂದ ಸಮುದಾಯದ ಅಭಿವೃದ್ಧಿಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಗ್ರಾಮೀಣ ರಂಗಭೂಮಿ ಕಲಾವಿದರಾದ ಕಾಳೇಶ ಕಮ್ಮಾರ, ರಾಮಪ್ಪ ನಡುಲಕೇರಿ, ಸುಲೋಚನಾ ವಾಲ್ಮೀಕಿ, ಸಾವಿತ್ರಿ ದಳವಾಯಿಮಠ, ಶರಣಪ್ಪ ಮೇಟಿ, ಸರಸ್ವತಿ, ದೇವೇಂದ್ರಗೌಡ ಪೂಜಾರಗೆ ಸಹಜ ಟ್ರಸ್ಟ್‌ನಿಂದ ನೀಡುವ ಸಹಜ ರಂಗ ಪುರಸ್ಕಾರ ನೀಡಿ ಗೌರವಿಸಲಾಯಿತು.

ವಿ.ಎನ್.ಅಶ್ವಥ ರಚಿಸಿದ ಶ್ರೀಕೃಷ್ಣ ಸಂಧಾನ, ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರಚಿಸಿದ ‘ಮೋಳಿಗೆ ಮಾರಯ್ಯ’ ನಾಟಕ ಪ್ರದರ್ಶನಗೊಂಡವು. ಗ್ರಾಮಪಂಚಾಯಿತಿ ಸದಸ್ಯರಾದ ಉಡಚಮ್ಮ ಉಪ್ಪಾರ, ಗಂಗಮ್ಮ ಕೂಕನಪಳ್ಳಿ, ರೇಣವ್ವ ಬಾದ್ರಿ, ಶರಣ ಕುಮಾರ ಅಮರಗಟ್ಟಿ, ನಿವೃತ ಸೈನಿಕ ಶಂಕರ ಮೇಣಸಗೇರಿ, ಗವಿಸಿದ್ದಪ್ಪ ಚಂಡೂರು, ಪ್ರಮುಖರಾದ ಸುನೀಲ ದೇಸಾಯಿ, ಸೂಗೀರಪ್ಪ , ಡಾ.ಬಸಯ್ಯ ಹಿರೇಮಠ, ಶರಣಪ್ಪ ಉಪನಾಳ, ಸುಭಾಸ ರ‌್ಯಾವಣಕಿ, ಸುಲೋಚನಮ್ಮ, ರಾಮಣ್ಣ ಮುರಡಿ, ರಮೇಶ ಸಂಗನಾಳ, ಗುನ್ನೆಪ್ಪ ಚನ್ನದಾಸರ, ಶ್ರೀಕಾಂತಗೌಡ ಮಾಲಿಪಾಟೀಲ್ ಇತರರಿದ್ದರು.

ಶ್ರೀಕೃಷ್ಣ ಸಂಧಾನ ನಾಟಕದಲ್ಲಿ ಕಲಾವಿದರಾದ ವಿಜಯಕುಮಾರ್, ರಮೇಶ, ಭೀಮೇಶ, ಕಾವ್ಯಾ, ಸುಮಿತ್ರ, ಸುಜಿತ್, ಅರವಿಂದ ಕುಲಕರ್ಣಿ, ಅಮರ್, ಆಸಿಫ್, ಬಸವಲಿಂಗ ಅಭಿನಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net