ರಸ್ತೆ ತಿರುವುಗಳಲ್ಲಿ ಸೂಚನಾ ಫಲಕ ಅಳವಡಿಸಿ, ಪಟ್ಟಣದ ಯುವಕರಿಂದ ಶಾಸಕರಿಗೆ ಮನವಿ

16102020 Yelburga appeal
Published on

ಯಲಬುರ್ಗಾ: ಪಟ್ಟಣದಿಂದ ಬಂಡಿ ಕ್ರಾಸ್ ಮೂಲಕ ಕುಷ್ಟಗಿಗೆ ತೆರಳುವ ರಸ್ತೆ ಮಾರ್ಗದ ತಿರುವಿನಲ್ಲಿ ಸೂಚನಾ ಫಲಕಗಳಿಲ್ಲದ ಕಾರಣ ಅಪಘಾತಗಳು ಸಂಭವಿಸುತ್ತಿದ್ದು, ಸೂಚನಾ ಫಲಕ ಮತ್ತು ಹಂಪ್ಸ್ ಅಳವಡಿಸುವಂತೆ ಒತ್ತಾಯಿಸಿ ಪಟ್ಟಣದ ಯುವಕರು ಶಾಸಕ ಹಾಲಪ್ಪ ಆಚಾರ್‌ಗೆ ಶುಕ್ರವಾರ ಮನವಿ ಸಲ್ಲಿಸಿದರು.

ಬಂಡಿ ಕ್ರಾಸ್ ಬಳಿ ಇತ್ತೀಚೆಗೆ ಸಂಭವಿಸಿದ ಅಪಘಾತದಲ್ಲಿ ಯಲಬುರ್ಗಾದ ಅಜಯ್ ಹುಬ್ಬಳ್ಳಿ ಎಂಬುವರು ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ತಾಲೂಕಿನ ಬಹುತೇಕ ಕಡೆಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿವೆ. ರಸ್ತೆ ತಿರುವುಗಳಲ್ಲಿ ಸೂಚನಾ ಫಲಕ, ಹಂಪ್ಸ್ ಇಲ್ಲದ ಕಾರಣ ಅಪಘಾತ ಸಂಭವಿಸುತ್ತಿವೆ. ಅಪಘಾತ ವಲಯಗಳಿದ್ದಲ್ಲಿ ಕಡ್ಡಾಯವಾಗಿ ನಾಮಫಕಲ ಅಳವಡಿಸಬೇಕು. ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಒತ್ತಾಯಿಸಿದರು.

ಯುವಕರಾದ ಯಾರ್ಕರ್ ಮಹೇಶ, ಭಾಷಾ ನೀಲಗಾರ್, ಬಸವರಾಜ ತೋಟದ, ಶಂಕರ ಟೆಂಗಿನಕಾಯಿ, ಕಲ್ಲೇಶಪ್ಪ ಕರಮುಡಿ, ಪ್ರಶಾಂತ ಸೀಳಿನ್, ಕಿರಣ್ ಸಿಳ್ಳಿ, ಅಮರೇಶ ಹುಬ್ಬಳ್ಳಿ, ರಮೇಶ ಸ್ಟಾಂಪಿನ್, ಕಲ್ಲೇಶಪ್ಪ ಕರಮುಡಿ, ಅಯ್ಯನಗೌಡ ಕೊಡಗಲಿ, ಸಂಗಮೇಶ ಬಿದರಿ, ರಮೇಶ ಸ್ಟಾಂಪಿನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net