

ನಾಪೋಕ್ಲು: ಆಪ್ತಮಿತ್ರರು ಸೇವಾರ್ಥ ಫೆ. 8 ರಂದು ಮೂರ್ನಾಡಿನಲ್ಲಿ ನಡೆಯುವ ಮೂರ್ನಾಡು ಯಕ್ಷೋತ್ಸವದ ಪೂರ್ವಭಾವಿ ಸಭೆ ಸಮುದಾಯ ಭವನದಲ್ಲಿ ಸೋಮವಾರ ನಡೆಯಿತು.
ಫೆ.8 ರಂದು ಹನುಮಗಿರಿ ಮೇಳದವರಿಂದ ನಡೆಯುವ ಯಕ್ಷಗಾನ ಪ್ರದರ್ಶನ ನಡೆಯಲಿದ್ದು, ಎರಡನೇ ವರ್ಷದ ಈ ಕಾರ್ಯಕ್ರಮದ ಯಶಸ್ವಿಗೆ ರೂಪುರೇಷೆ ಕುರಿತು ಪದಾಧಿಕಾರಿಗಳು ಚರ್ಚೆ ಮಾಡಿದರು.
ಆಪ್ತಮಿತ್ರ ಬಳಗದ ಪದಾಧಿಕಾರಿಗಳಾದ ಕುಶನ್ ರೈ ,ವಿಶ್ವನಾಥ್ , ಜಯಂತ್, ಪುರುಷೋತ್ತಮ್, ಗಿರೀಶ್ ರೈ, ಚಿನ್ನು, ಅಶ್ವತ್ ರೈ , ಚಂದನ್, ಪುರುಷೋತ್ತಮ್ ಕುಲಾಲ್, ಸಜೀವ , ಮೋಹನ್, ಜತಿನ್, ವಿನಯ್, ಚಂದ್ರಶೇಖರ್, ಹೊದ್ದೂರು ಚಂದ್ರಶೇಖರ್ ಕುಲಾಲ್ , ತನ್ಮಯ್, ಧ್ಯಾನಿಕ್ ಉಪಸ್ಥಿತರಿದ್ದರು.