

ಕುಂದಾಪುರ: ಕೋಣಿ ಗಜೇಂದ್ರ ಆಚಾರ್ ಸಾರಥ್ಯದಲ್ಲಿ ಯಕ್ಷರಾತ್ರಿ ದಶಯಾನ ಕುಂದಾಪುರದ ನೆಹರು ಮೈದಾನದಲ್ಲಿ ನಡೆಯಿತು. ಯಕ್ಷರಾತ್ರಿ ಯಶೋಗಾಥೆ ಗೌರವವಾಗಿ ಪದ್ಮಮ್ಮ ಹೊದ್ರೋಳ್ಳಿ ಬೀಜಾಡಿ ಅವರನ್ನು, ಕಲಾ ಗೌರವವಾಗಿ ಕಮಲಶಿಲೆ ಮಹಾಬಲ ದೇವಾಡಿಗ, ರವೀಂದ್ರ ದೇವಾಡಿಗ ಕಮಲಶಿಲೆ, ಸುಬ್ರಹ್ಮಣ್ಯ ಗಾಣಿಗ ಕೋಣಿ ಅವರನ್ನು ಸನ್ಮಾನಿಸಲಾಯಿತು.
ಶ್ರೇಷ್ಠ ಸಂಘಟನಾ ಗೌರವವಾಗಿ ಸಂಪತ್ ಕನ್ನಂತ್ ಕುಡೇರಿ, ಪ್ರಸಂಗಕರ್ತೆ ಶ್ವೇತಾ ಬೋಳಂಬಳ್ಳಿ, ಯಕ್ಷಗುರು ಪ್ರಸಾದ ಮೊಗೆಬೆಟ್ಟು, ನಿರೂಪಕರಾದ ದಾಮೋದರ ಶರ್ಮ ಬಾರ್ಕೂರು, ಪ್ರವೀಣ್ ಭಂಡಾರಿ ಕೋಣಿ ಅವರನ್ನು ಗೌರವಿಸಲಾಯಿತು
ನಾರಾಯಣ ಆಚಾರ್ ಉಡುಪಿ, ಉದ್ಯಮಿ ಉದಯ ಆಚಾರ್ ಹುಚ್ಕೆರೆ, ಹಿರಿಯ ಧಾರ್ಮಿಕ ಮುಖಂಡ ಕೋಣಿ ಕೃಷ್ಣದೇವ ಕಾರಂತ್, ಮೇಳದ ಯಜಮಾನ ವೈ.ಕರುಣಾಕರ ಶೆಟ್ಟಿ, ಭಾಗವತ ರಾಘವೇಂದ್ರ ಆಚಾರ್ ಜನ್ಸಾಲೆ, ಯಕ್ಷಪೋಷಕ ಮಹಮದ್ ಇಕ್ಬಾಲ್ ಹಾಲಾಡಿ, ಹಿಂದುಳಿದ ವರ್ಗಗಳ ಮಕ್ಕಳ ಕಲ್ಯಾಣ ಇಲಾಖೆಯ ಶ್ರೀಕಾಂತ ಗುನಗ, ಉದ್ಯಮಿ ಮನೋಹರ ಕೋಣಿ, ಮಧುಕರ ಮಣಿಯಾಡಿ, ಅಶೋಕ ಪೂಜಾರಿ ಕೋಣಿ ಉಪಸ್ಥಿತರಿದ್ದರು. ಗಜೇಂದ್ರ ಆಚಾರ್ ಸ್ವಾಗತಿಸಿದರು. ದಾಮೋದರ ಶರ್ಮಾ ನಿರೂಪಿಸಿದರು.