ಕನ್ನಡಕ್ಕೆ ಯಕ್ಷಗಾನದ ಕೊಡುಗೆ ಅಪಾರ

TALAMADDALE IN Siddapura
Published on

ಸಿದ್ದಾಪುರ: ಕನ್ನಡ ಭಾಷೆಗೂ ಯಕ್ಷಗಾನಕ್ಕೂ ಅವಿನಾಭಾವ ಸಂಬಂಧ. ಪ್ರಾಚೀನ ಕಲೆಯಾದ ಯಕ್ಷಗಾನವು ಕನ್ನಡ ಭಾಷೆಯನ್ನು ತನ್ನೊಳಗಾಗಿಸಿಕೊಂಡು ತಾನು ಬೆಳೆದಿದ್ದಲ್ಲದೇ ಕನ್ನಡವನ್ನೂ ಸಾರ್ಥಕವಾಗಿ ಬೆಳೆಸಿದೆ. ನಡುಗನ್ನಡ ಶೈಲಿ ಪದ್ಯಗಳು ಹಾಗೂ ಶಿಷ್ಟ ಕನ್ನಡ ಭಾಷೆಯ ಸೊಗಸಾದ ಮಾತುಗಾರಿಕೆ ಎರಡನ್ನೂ ಇಲ್ಲಿ ನೋಡಬಹುದು ಎಂದು ಹೊನ್ನೆಘಟಗಿಯ ಸಹಿಪ್ರಾ ಶಾಲೆಯ ಮುಖ್ಯಶಿಕ್ಷಕ ರಾಮನಾಥ ನಾಯ್ಕ ಕಡತೋಕಾ ಹೇಳಿದರು.

ತಾಲೂಕಿನ ಹೊನ್ನೆಘಟಗಿಯ ಸಹಿಪ್ರಾ ಶಾಲೆಯ ಶತಮಾನೋತ್ಸವ ಭವನದಲ್ಲಿ ಇಟಗಿ ಕಲಾಭಾಸ್ಕರ ಸಂಸ್ಥೆಯವರು ಆಯೋಜಿಸಿದ್ದ ಕನ್ನಡ ನುಡಿಸೇಸೆ-2024 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿಕ್ಷಕ ಎಂ.ಎನ್. ಹರ್ತಿ, ಶಿಕ್ಷಕಿ ಪಾರ್ವತಿ ಪಟಗಾರ, ಅಮೃತಾ ಗೌಡ ಉಪಸ್ತಿತರಿದ್ದರು.

ನಂತರ ಕವಿ ಪೋ›. ಎಂ.ಎ.ಹೆಗಡೆ ದಂಟಕಲ್ ವಿರಚಿತ ಲವಕುಶ ಕಾಳಗ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀಧರ ಹೆಗಡೆ ಹಣಗಾರು ಹಾಗೂ ಮದ್ದಳೆಯಲ್ಲಿ ಗಣಪತಿ ಹೆಗಡೆ ಹೊನ್ನೆಕೈ ಸಹಕರಿಸಿದರು.

ಮುಮ್ಮೇಳದಲ್ಲಿ ಮಹಾಬಲೇಶ್ವರ ಭಟ್ಟ ಇಟಗಿ(ಶ್ರೀರಾಮ), ವಿನಾಯಕ ಹೆಗಡೆ ಕವಲಕೊಪ್ಪ (ಶತ್ರುಘ್ನ ಮತ್ತು ವಾಲ್ಮಿಕಿ), ಪ್ರಸನ್ನ ಹೆಗಡೆ ಹೊಸಗದ್ದೆ (ಕುಶ), ಕೌಸ್ತುಭ ಹೆಗಡೆ (ಲವ)ಪಾತ್ರಗಳನ್ನು ನಿರ್ವಹಿಸಿ ಮೆಚ್ಚುಗೆಗಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net