ಯಕ್ಷಗಾನ ಯುವ ಭಾಗವತ ನೇಣಿಗೆ ಶರಣು

ULL.NOV-18, KEERTHAN SHETTY
Published on

ಉಳ್ಳಾಲ: ಇರಾ ಗ್ರಾಮದ ಮೂಳೂರಿನ ಬಾಡಿಗೆ ಮನೆಯಲ್ಲಿ ವಾಸವಿದ್ದ ಯಕ್ಷಗಾನ ಯುವ ಭಾಗವತ ಕೀರ್ತನ್ ಶೆಟ್ಟಿ ವಗೆನಾಡು(39) ಶುಕ್ರವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಶಿಷ್ಯರಾಗಿದ್ದ ಕೀರ್ತನ್ ಶೆಟ್ಟಿ ಹಿಂದೆ ಬಪ್ಪನಾಡು ಮೇಳದಲ್ಲಿ ಭಾಗವತರಾಗಿದ್ದರು. ಬಳಿಕ ವಿವಿಧ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು. ಕರೊನಾ ಸಂದರ್ಭ ಹಾಗೂ ಬಳಿಕ ಸಣ್ಣ ಮೇಳಗಳಲ್ಲಿ ಭಾಗವತರಾಗಿದ್ದರು. ಶುಕ್ರವಾರ ಮಧ್ಯಾಹ್ನ ತಾವು ವಾಸವಿದ್ದ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೀವನದಲ್ಲಿ ಜಿಗುಪ್ಸೆಯಿಂದ ಕೃತ್ಯ ಎಸಗಿದ್ದಾರೆಂದು ಅವರ ಸಹೋದರ ಗೌತಮ್ ಶೆಟ್ಟಿ ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ. ಮೃತರು ಪತ್ನಿ, ಅವಳಿ ಪುತ್ರರನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net