ಕಲಘಟಗಿಯಲ್ಲಿ ಮನರಂಜಿಸಲಿದೆ ಯಕ್ಷಗಾನ

YAKSHAGANA
Published on

ಕಲಘಟಗಿ: ಪಟ್ಟಣದ ಜನತಾ ಇಂಗ್ಲಿಷ್ ಸ್ಕೂಲ್ ಸಭಾಭವನದಲ್ಲಿ ಜುಲೈ 23 ರಂದು ಸಂಜೆ 6 ಗಂಟೆಗೆ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ.

ಯಕ್ಷಗಾನ ಮತ್ತು ಸಂಸ್ಕೃತಿ ಸಂಘ ಧಾರವಾಡ, ಕಲಘಟಗಿಯ ಬಂಟರ ಸಂಘ, ವಕೀಲರ ಸಂಘ ಹಾಗೂ ಜನತಾ ಇಂಗ್ಲಿಷ್ ಸ್ಕೂಲ್ ಸಹಯೋಗದಲ್ಲಿ ಪ್ರದರ್ಶನ ಜರುಗಲಿದೆ.

ಕುಂದಾಪುರದ ಹಾಲಾಡಿಯ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿಯಿಂದ ಕಾರ್ತವೀರ್ಯ ಮತ್ತು ಚಂದ್ರಾವಳಿ ಪ್ರಸಂಗ ಪ್ರದರ್ಶನಗೊಳ್ಳಲಿದೆ. ರಾಘವೇಂದ್ರಮಯ್ಯ, ಉಮೇಶ ಮರಾಠ, ಭಾಗವತಿ ಕೆ.ಎಲ್, ಚಂಡೆ ಸುಬ್ರಮಣ್ಯ ಭಟ್ ಹಾಗೂ ರಮೇಶ ಭಂಡಾರಿ ಮುದ್ದಲೆಯಲ್ಲಿ ರಂಜಿಸಲಿದ್ದಾರೆ. ಮಹಾಬಲೇಶ್ವರ ಭಟ್ ಕ್ಯಾದಗಿ ಮತ್ತು ಶಂಕರನಾಯ್ಕ ಬಳ್ಳೂರ ಹಾಸ್ಯ ಪಾತ್ರದ ರಸಮಂಜರಿ ಉಣಬಡಿಸಲಿದ್ದಾರೆ ಎಂದು ಜನತಾ ಇಂಗ್ಲಿಷ್ ಸ್ಕೂಲ್‌ನ ಪ್ರಾಂಶುಪಾಲ ಶ್ರೀಧರ ಪಾಟೀಲ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net