ಸೆ.14ಕ್ಕೆ ಅಮೇರಿಕಾದಲ್ಲಿ ಯಕ್ಷಗಾನ ತರಬೇತಿ

udp-12-ganesh
Published on

ಉಡುಪಿ: ಅಮೇರಿಕಾದ ಕ್ಯಾಲಿಫೋರ್ನಿಯಾದ ಹೇವಾರ್ಡ್​ ನ ಶಾಬೂ ಕಾಲೇಜಿನ ಸಭಾಂಗಣದಲ್ಲಿ ಸೆ.23 ಮತ್ತು 24 ರಂದು ನಡೆಯುವ ಯಕ್ಷಗಾನ ಪ್ರದರ್ಶನಕ್ಕೆ ತರಬೇತಿ ನೀಡಲು ಸೆ.14 ರಂದು ಅಮೇರಿಕಾಕ್ಕೆ ತೆರಳಿದ್ದೇನೆ ಎಂದು ಯಕ್ಷಗುರು ಕೆ.ಜಿ ಗಣೇಶ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಹಿಂದೆ ಏಳು ಬಾರಿ ಅಮೇರಿಕಾಕ್ಕೆ ತೆರಳಿದ್ದು, ಅಲ್ಲಿ ವಾಸವಿರುವ ನಮ್ಮ ಊರಿನವರಿಗೆ ಯಕ್ಷಗಾನ ತರಬೇತಿ ನೀಡಿದ್ದೇನೆ. ಈ ಬಾರಿ ಚಕ್ರವ್ಯೂಹ ಎಂಬ ಪ್ರಸಂಗವನ್ನು ನಿರ್ದೇಶಿಸಿ, ಪ್ರದರ್ಶಿಸಲಿದ್ದೇವೆ ಎಂದರು.

ಅ.1 ರಂದು ಸಾನ್ವಾನ್​ ಸನಾತನ ಧರ್ಮಕೇಂದ್ರದಲ್ಲಿ ಸನಾತನ ಧರ್ಮ ಕೇಂದ್ರದಲ್ಲಿ ಗಣೇಶೋತ್ಸವ ಪ್ರಯುಕ್ತ ಮೀನಾಕ್ಷಿ ಕಲ್ಯಾಣ ಎಂಬ ಪ್ರಸಂಗವನ್ನು, ಅ. 7 ರಂದು ವೀರಮಣಿ ಕಾಳಗ ಎಂಬ ಪ್ರಸಂಗವನ್ನು ನಿರ್ದೇಶಿಸಿ ಪ್ರದರ್ಶಿಸಲಿದ್ದೇವೆ ಎಂದರು.

ವೆಂಕಟೇಶ್​ ಆಚಾರ್ಯ ಕುತ್ಪಾಡಿ, ವಿಶ್ವನಾಥ್​ ಆಚಾರ್ಯ ಕಿದಿಯೂರು, ರತ್ನಾಕರ ಆಚಾರ್ಯ ಉದ್ಯಾವರ, ಜಗದೀಶ್​ ಆಚಾರ್ಯ ಅಂಬಲಪಾಡಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net